of your HTML document.

AP: ಅಂತ್ಯಸಂಸ್ಕಾರಕ್ಕೆ ಹೋಗುವಾಗ ಹೆಜ್ಜೆನು ದಾಳಿ – ಹೆಣ ಬಿಟ್ಟು ಓಡಿದ ಜನ

AP: ಅಂತ್ಯಸಂಸ್ಕಾರಕ್ಕೆ ಶವವನ್ನು ಕೊಂಡೊಯ್ಯುತ್ತಿರುವ ವೇಳೆ ಹೆಜ್ಜೇನು ದಾಳಿ ಮಾಡಿದ್ದು, ಇದರಿಂದ ವಿಚಲಿತರಾದ ಜನರು ಶವವನ್ನು ನಡು ರಸ್ತೆಯಲ್ಲಿ ಬಿಟ್ಟು ಓಡಿದ ಅನಿರೀಕ್ಷಿತ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯ ಗನ್ನೇರು ಕೊಯ್ಯಪಡುವಿನಲ್ಲಿ ಕೊಪ್ಪುಲ ಪಲ್ಯಮ್ಮ (86) ನಿಧನರಾಗಿದ್ದರು. ಹೀಗಾಗಿ ಮೃತ ದೇಹವನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಪಟಾಕಿ ಸೇರಿಸಿದ ಪರಿಣಾಮ ಪಕ್ಕದ ಮರದಲ್ಲಿದ್ದ ಹೆಜ್ಜೆನು ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿದವರ ಮೇಲೆ ದಾಳಿ ಮಾಡಿದೆ. ಹೀಗಾಗಿ ಜನರು ಶವವನ್ನು ನಡ ರಸ್ತೆಯಲ್ಲಿ ಇಟ್ಟು ದಿಕ್ಕಾಪಾಲಾಗಿ ಓಡಿದ್ದಾರೆ.

ಘಟನೆಯಲ್ಲಿ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಗೌರಿದೇವಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

Comments are closed.