of your HTML document.

Police Hat: ಬ್ರಿಟೀಷರ ಕಾಲದ ಟೋಪಿಗೆ ಗೇಟ್ ಪಾಸ್ – ಪೊಲೀಸರಿಗೆ ಬರ್ತಾ ಇದೆ ಹೊಸ ಸ್ಮಾರ್ಟ್ ಹ್ಯಾಟ್

Police Hat: ಕರ್ನಾಟಕದಲ್ಲಿ ಹೆಡ್ ಕಾನ್​​ಸ್ಟೆಬಲ್​​ ಹಾಗೂ ಕಾನ್​​ ಸ್ಟೆಬಲ್​ಗಳು ಈಗಲೂ ಬ್ರಿಟಿಷ್​ ಕಾಲದ ಟೋಪಿಯನ್ನು (Hat) ಧರಿಸುತ್ತಿದ್ದು ಈ ಟೋಪಿ ಬದಲಿಸುವ ಕೂಗು ಮೊದಲಿನಿಂದಲೂ ಕೇಳಿಬರುತ್ತಿತ್ತು. ಕೊನೆಗೂ ಇದಕ್ಕೆ ಸರ್ಕಾರ ಅಸ್ತು ಎಂದಿದೆ.

ಹೌದು, ಪೊಲೀಸರ ಬಹುದಿನದ ಬೇಡಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಸದ್ಯದಲ್ಲೇ ದೊಡ್ಡ ಟೋಪಿ ಬದಲಾಗಿ ಸ್ಮಾರ್ಟ್​​ ಪೀಕ್​ ಹ್ಯಾಟ್​ ಹೆಡ್​ ಕಾನ್​​ಸ್ಟೆಬಲ್​​ ಹಾಗೂ ಕಾನ್​​ ಸ್ಟೆಬಲ್​ಗಳ ತಲೆಯನ್ನು ಅಲಂಕರಿಸಲಿದೆ. ಇಂತಹದೊಂದು ಸಾಹಸಕ್ಕೆ ಪೊಲೀಸ್​ ಇಲಾಖೆ ದಿಟ್ಟ ಹೆಜ್ಜೆಯಿಟ್ಟಿದೆ.

ಪ್ರಸ್ತುತ ಪೊಲೀಸ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಗ್ಲೋಚ್ ಟೋಪಿಯಿಂದಾಗಿ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಇತ್ತೀಚೆಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಇನ್ನು ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಲ್ಲಿನ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳಿಗೆ ಪೀಕ್ ಕ್ಯಾಪ್‌ಗಳನ್ನು ನೀಡಲಾಗಿದೆ. ಸದ್ಯ ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ನೀಡುವ ಕುರಿತಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಡಿಜಿ-ಐಜಿಪಿ ಡಾ. ಅಲೋಕ್​ ಮೋಹನ್ ಸೂಚಿಸಿದ್ದಾರೆ.

Comments are closed.