of your HTML document.

ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ಪ್ರಯಾಣಿಕರು ಪಾರು

Hubballi: ಸುಮಾರು 50ಕ್ಕೂ ಅಧಿಕ ಪ್ರಯಾಣಿಕರಿದ್ದ ಸಾರಿಗೆ ಬಸ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿಹೊತ್ತಿಕೊಂಡ ಘಟನೆ ಹುಬ್ಬಳ್ಳಿ- ವಿಜಯಪುರ- ಸೋಲಾಪುರ ಮುಖ್ಯ ರಸ್ತೆಯಲ್ಲಿ ಇಂದು ನಡೆದಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಹುಬ್ಬಳಿಯಿಂದ ಮಂಟೂರಿಗೆ ತೆರಳುತ್ತಿದ್ದ ಬಸ್‌ನ ಇಂಜಿನ್‌ನಲ್ಲಿ ಹೊಗೆ ಕಾಣಿಸಿದಾಗ ನಂತರ ಬೆಂಕಿ ಸಣ್ಣ ಪ್ರಮಾಣದಲ್ಲಿ ಆವರಿಸಿದೆ. ಕೂಡಲೇ ಚಾಲಕ, ಕಂಡಕ್ಟರ್ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಬೆಂಕಿಯ ತೀವ್ರತೆಗೆ ಬಸ್ ನ ಒಳ ಭಾಗವೂ ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟು ಯಶಸ್ವಿಯಾದರು.

ಹಳೆ ಬಸ್‌ ಆಗಿದ್ದರಿಂದ ಶಾರ್ಟ್ ಸರ್ಕ್ಯೂಟ್‌ನಿಂದಲೇ ಇಂತಹ ಅನಾಹುತ ಆಗುತ್ತಿವೆ. ಗ್ರಾಮಾಂತರ ಭಾಗದಲ್ಲಿ ಹಳೆ ಬಸ್ ಮತ್ತು ಅವಧಿ ಮುಗಿದ ಬಸ್‌ಗಳನ್ನು ಸರ್ಕಾರ ಒಡಿಸಬಾರದು ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.