Myanmar: ಈಜುಕೊಳದಲ್ಲಿ ಜೋಡಿಗಳ ರೋಮ್ಯಾನ್ಸ್ – ಭೂಕಂಪದಿಂದ ಜಸ್ಟ್ ಮಿಸ್, ವಿಡಿಯೋ ವೈರಲ್

Myanmar: ಮ್ಯಾನ್ಮಾರ್, ಥೈಯ್ಲೆಂಡ್ ದೇಶಗಳಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಗಗನಚುಂಬಿ ಕಟ್ಟಡಗಳು ನೆಲಕಚ್ಚಿವೆ. ಅಪ್ಘಾನಿಸ್ತಾನದಲ್ಲಿಯೂ ಇಂದು ಇದು ಪ್ರಭಾವ ಬೀರಿದೆ. ಮ್ಯಾನ್ಮಾರ್, ಥೈಯ್ಲೆಂಡ್ ದೇಶಗಳಲ್ಲಿ ಕೆಲವು ಕಡೆ, ಹೆಣದ ರಾಶಿಯೇ ಕಾಣಿಸುತ್ತಿದೆ. ಇನ್ನು ಮ್ಯಾನ್ಮರ್ ನಲ್ಲಿ ಭೂಕಂಪ ಉಂಟಾದ ಸಮಯದಲ್ಲಿ ಈಜುಕೊಳದಲ್ಲಿ ಮೈಮರೆತಿದ್ದ ಪ್ರೇಮಿಗಳು ಜಸ್ಟ್ ಎಸ್ಕೇಪ್ ಆಗಿರುವ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಮ್ಯಾನ್ಮಾರ್ನಲ್ಲಿ ಒಂದು ಕಡೆ ಕೊನೆಯ ಮಹಡಿಯಲ್ಲಿದ್ದ ಸ್ವಿಮ್ಮಿಂಗ್ ಫೂಲ್ನಲ್ಲಿ ಭೂಕಂಪದ ಅರಿವೇ ಇಲ್ಲದ ಪ್ರೇಮಿಗಳು ಮೈಮರೆತು ರೊಮಾನ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ಈಜುಕೊಳ ಅಲುಗಾಡಿದ್ದರಿಂದ ಏನೋ ಅನಾಹುತ ಸಂಭವಿಸುತ್ತಿದೆ ಎಂದು ಅವರಿಗೆ ತಿಳಿಯಲು ಸ್ವಲ್ಪ ಹೊತ್ತು ಬೇಕಾದರೂ, ಕೊನೆಗೆ ಜಸ್ಟ್ ಎಸ್ಕೇಪ್ ಆಗಿದ್ದಾರೆ. ಅವರು ಅಲ್ಲಿಂದ ಕಾಲು ಕಿತ್ತ ಸ್ವಲ್ಪ ಹೊತ್ತಿನಲ್ಲಿಯೇ ಈಜುಕೊಳದ ನೀರು, ಅಲ್ಲಿರುವ ದಿಂಬುಗಳೆಲ್ಲಾ ಚಿಮ್ಮಿ ರಸ್ತೆಗೆ ಬಿದ್ದಿವೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Comments are closed.