of your HTML document.

Telangana: ಪ್ರೀತಿಸಿದ ಇಬ್ಬರು ಯುವತಿಯರನ್ನು ಒಂದೇ ಮಂಟಪದಲ್ಲಿ ಮದುವೆಯಾದ ಯುವಕ!!

Telangana : ಯುವಕನೋರ್ವ ಇಬ್ಬರು ಯುವತಿಯರನ್ನು ಪ್ರೀತಿಸಿ, ಒಂದೇ ಮಂಟಪದಲ್ಲಿ ಅವರಿಬ್ಬರನ್ನು ಮದುವೆಯಾದಂತಹ ಅಪರೂಪದ ವಿದ್ಯಮಾನವೆಂದು ಬೆಳಕಿಗೆ ಬಂದಿದೆ.

ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಲಿಂಗಾಪುರ ಮಂಡಲದ ಗುಮ್ನೂರ್ ಗ್ರಾಮದ ನಿವಾಸಿ ಸೂರ್ಯದೇವ್ ಎನ್ನುವಾತ ಲಾಲ್ ದೇವಿ ಮತ್ತು ಝಲ್ಕರಿ ದೇವಿಯನ್ನು ಪ್ರೀತಿಸಿದ್ದು, ಒಂದೇ ಮಂಟಪದಲ್ಲಿ ಇಬ್ಬರನ್ನು ವಿವಾಹವಾಗಿದ್ದಾನೆ.

ಸೂರ್ಯದೇವ್‌ ಇಬ್ಬರನ್ನು ಪ್ರೀತಿಸುತ್ತಿದ್ದರು. ಮೂವರು ಜತೆಯಾಗಿ ವಾಸಿಸುವ ನಿರ್ಧಾರ ಮಾಡಿದ್ದರು. ಆರಂಭದಲ್ಲಿ ಇದು ಗ್ರಾಮದ ಹಿರಿಯರಿಗೆ ಇಷ್ಟವಿರಲಿಲ್ಲ. ಆದರೆ ನಂತರ ಗ್ರಾಮದ ಹಿರಿಯರು ಕೂಡ ವಿವಾಹಕ್ಕೆ ಮುಂದೆ ಬಂದರು ಎಂದು ವರದಿ ತಿಳಿಸಿದೆ. ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಎರಡೂ ವಧುಗಳ ಹೆಸರನ್ನು ಮುದ್ರಿಸಿ ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ.

Comments are closed.