ಹಾಲಿನಿಂದ 209 ಕೋ. ಆದಾಯ, ಆಲ್ಕೋಹಾಲ್’ನಿಂದ 5068 ಕೋ. ರೂ. ಲಾಭ!

New Delhi: ಹಾಲು ಒಳ್ಳೆಯದಾ ಆಲ್ಕೋಹಾಲ್ ಒಳ್ಳೆಯದಾ? ಆರೋಗ್ಯದ ಮಟ್ಟಿಗೆ ಹಾಲು, ಆದಾಯದ ಪ್ರಕಾರ ಆಲ್ಕೋಹಾಲ್. ಹಾಲು ಉತ್ಪನ್ನಗಳಿಂದ 209 ಕೋಟಿ ಆದಾಯ, ಆಲ್ಕೋಹಾಲ್’ನಿಂದ 5068 ಕೋಟಿ ರೂ. ಲಾಭ ಆಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ. ಹಾಗೆಯೇ, ಹಾಲಿನ ಮೇಲೆ ವಿಧಿಸಲಾಗುವ ಜಿಎಸ್ ಟಿ ಯಿಂದ 209.9 ಕೋಟಿ ಸಂಗ್ರಹವಾಗಿದೆ. 2024-2025ನೇ ಸಾಲಿನ ಅಂಕಿ ಅಂಶ ಇದಾಗಿದ್ದು, ಸರ್ಕಾರದಿಂದಲೇ ಅಧಿಕೃತ ಮಾಹಿತಿ ಸಿಕ್ಕಿದೆ.
ಮೂಲಗಳ ಮಾಹಿತಿ ಪ್ರಕಾರ ಅಲ್ಲಿ 21.27 ಕೋಟಿ ಲೀಟರ್ ಮದ್ಯ ಮಾರಾಟವಾಗಿದೆ. 2023-24ನೇ ಸಾಲಿನಲ್ಲಿ 5.82 ಲಕ್ಷ ಲೀಟರ್ ದಿನವೊಂದಕ್ಕೆ ಸೇಲ್ ಮಾಡಲಾಗಿದೆಯಂತೆ.
Comments are closed.