of your HTML document.

CD: ರಮೇಶ್ ಜಾರಕಿಹೊಳಿಯ ಸಿಡಿ ಮಾಡಿಸಿದ್ದೇ ವಿಜೇಂದ್ರ ಮತ್ತು ಡಿಕೆಶಿ – ಅಚ್ಚರಿ ಸತ್ಯ ರಿವಿಲ್ ಮಾಡಿದ ಯತ್ನಾಳ್

CD: ಕೆಲವು ವರ್ಷಗಳ ಹಿಂದೆ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿಯವರ ಅಶ್ಲೀಲ ವಿಡಿಯೋ ಒಂದು ವೈರಲ್ ಆಗಿ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದು ಅವರ ಸಚಿವ ಸ್ಥಾನಕ್ಕೆ ಕುತ್ತು ತಂದಿತ್ತು. ಆದರೆ ನಂತರದಲ್ಲಿ ತನಿಖೆ. ವಿಚಾರಣೆ ಎಲ್ಲವೂ ಮುಗಿದು ಈ ಪ್ರಕರಣ ಸುಖಾಂತ್ಯ ಕಂಡಿತ್ತು. ಬಳಿಕ ರಮೇಶ್ ಜಾರಕಿಹೊಳಿಯವರು ಡಿಕೆಶಿ ಅವರೇ ನನ್ನ ವಿಡಿಯೋ ಮಾಡಿಸಿದೆಂದು ಪರೋಕ್ಷವಾಗಿ ಎಲ್ಲೆಡೆ ಆರೋಪಿಸುತ್ತಾ ಬರುತ್ತಿದ್ದರು. ಆದರೆ ಈಗ ಅಚ್ಚರಿ ಎಂಬಂತೆ ಬಸವನಗೌಡ ಪಾಟೀಲ್ ಯತ್ನಾಳ್ ಅವರು ರಮೇಶ್ ಜಾರಕಿಹೊಳಿ ಅವರ ಸಿಟಿ ಮಾಡಿಸಿದ್ದು ಯಾರೆಂಬುದನ್ನು ರಿವಿಲ್ ಮಾಡಿದ್ದಾರೆ.

ಹೌದು ಬಿಜೆಪಿಯಿಂದ ಉಚ್ಚಾಟನೆಗೊಂಡ ಯತ್ನಾಳ್ ಅವರು ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ವೇಳೆ ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ಬಿವೈ ವಿಜಯೇಂದ್ರ ಮತ್ತು ಡಿಕೆ ಶಿವಕುಮಾರ್ ಎಂದು ಅವರು ಅಚ್ಚರಿ ಸತ್ಯವೊಂದನ್ನು ರಿವಿಲ್ ಮಾಡಿದ್ದಾರೆ. ಕರ್ನಾಟಕದಲ್ಲಿ ಹನಿಟ್ರ್ಯಾಪ್ ಪ್ರಕರಣ ಸದ್ದು ಮಾಡುತ್ತಿರುವಾಗಲೇ ಯತ್ನಾಳ್ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.

ಯತ್ನಾಳ್ ಹೇಳಿರುವುದಕ್ಕೆ ಯಾವುದಾದರೂ ಸಾಕ್ಷ್ಯಗಳಿವೆಯೇ ಎಂದು ತಿಳಿದುಬಂದಿಲ್ಲ. ಒಂದು ವೇಳೆ ಅವರು ಸಾಕ್ಷ್ಯಗಳನ್ನಿಟ್ಟುಕೊಂಡೇ ಮಾತನಾಡಿದ್ದರೆ ಅದು ವಿಜಯೇಂದ್ರರನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ.

Comments are closed.