of your HTML document.

Kodagu: ಒಂದೇ ಕುಟುಂಬದ ನಾಲ್ವರ ಹತ್ಯೆ-ಆರೋಪಿ ಅರೆಸ್ಟ್‌!

Kodagu: ಕೊಡಗಿನಲ್ಲಿ 7 ವರ್ಷದ ಮಗಳು ಸೇರಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕಡಿದು ಭೀಕರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಕೇರಳದಲ್ಲಿ ಬಂಧನ ಮಾಡಿದ್ದಾರೆ.

ಆರೋಪಿ ಗಿರೀಶ್‌ (38) ಬಂಧನಕ್ಕೊಳಗಾದ ವ್ಯಕ್ತಿ.

ಕೊಡಗು ಜಿಲ್ಲೆಯ ಪೋನಂಪೇಟೆ ತಾಲ್ಲೂಕಿನ ಬೇಗೂರು ಸಮೀಪದ ಕೊಳತೋಡು ಗ್ರಾಮ ಒಂಟಿ ಮನೆಯೊಂದಕ್ಕೆ ನುಗ್ಗಿ ಗಿರೀಶ್‌, ಕತ್ತಿಯಿಂದ ತನ್ನ ಮಾವ ಕರಿಯ (75), ಅತ್ತೆ ಗೌರಿ (70), ನಾಗಿ (35), ಕಾವೇರಿ (7) ಕೊಚ್ಚಿ ಕೊಲೆ ಮಾಡಿ ನಂತರ ಪರಾರಿಯಾಗಿದ್ದ.

ಎಂಟು ವರ್ಷದ ಹಿಂದೆ ನಾಗಿ ಜೊತೆ ಆರೋಪಿ ಗಿರೀಶ್‌ ಮೂರನೇ ವಿವಾಹವಾಗಿದ್ದ. ತೋಟದ ಮನೆಯಲ್ಲಿ ವಾಸವಿದ್ದ. ಅನೈತಿಕ ಸಂಬಂಧ ಹಿನ್ನೆಲೆ ಗಿರೀಶ್‌ ತನ್ನ ಕುಟುಂಬದ ಎಲ್ಲರನ್ನೂ ಕೊಲೆ ಮಾಡಿದ್ದ.

ಕೇರಳದವನಾಗಿದ್ದ ಆರೋಪಿಯನ್ನು ಹುಡುಕಲು ಪೊನ್ನಂಪೇಟೆ ಪೊಲೀಸರು ಕೇರಳಕ್ಕೆ ತೆರಳಿದ್ದರು. ಆಗ ಅಲ್ಲಿ ಆರೋಪಿ ಪತ್ತೆಯಾಗಿದ್ದಾನೆ.

ಕೊಡಗಿಗೆ ಆರೋಪಿ ಗಿರೀಶ್‌ನನ್ನು ಕರೆದುಕೊಂಡು ಬರಲಾಗಿದ್ದು, ಕೊಲೆಗೆ ನಿಖರ ಕಾರಣ ವಿಚಾರಣೆ ಬಳಿಕ ತಿಳಿದು ಬರಬೇಕಿದೆ.

Comments are closed.