of your HTML document.

ಕೊರಂಬಡ್ಕ ನೇಮೋತ್ಸವಕ್ಕೆ ಗೊನೆ ಮುಹೂರ್ತ: ಎ.5, 6ರಂದು ವಿಜೃಂಭಣೆಯ‍ ನೇಮೋತ್ಸವ   

Sullia: ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ, ಗುಳಿಗ ದೈವ, ಸ್ವಾಮಿ ಕೊರಗಜ್ಜ‌ ದೈವಗಳ ಸನ್ನಿಧಿಯಲ್ಲಿ ಎ.5 ರಿಂದ 6 ರವರೆಗೆ ನಡೆಯುವ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಇಂದು ಬೆಳಗ್ಗೆ ಗೊನೆ ಮುಹೂರ್ತ ನಡೆಯಿತು.

ಮಾ.29 ರಂದು ಶನಿವಾರ ಪ್ರಾತಃಕಾಲ ಶ್ರೀ ಕ್ಷೇತ್ರ ಕೊರಂಬಡ್ಕದಲ್ಲಿ ದೀಪಾರತಿ ಬೆಳಗಿ ಪ್ರತಿ ವರ್ಷದಂತೆ ಸಮಾಜ ಸೇವಕಿ ಕು.ಮಹಾಲಕ್ಷ್ಮಿ ಕೊರಂಬಡ್ಕ ಅವರ ತೋಟದಲ್ಲಿ ಕ್ಷೇತ್ರದ ಪಾತ್ರಿಗಳಾದ ಮೋಹನ್ ಹೊಸಗದ್ದೆ ಮತ್ತು ಬಾಬು ಜಯನಗರ ಅವರು ಗೊನೆ ಕಡಿಯುವ ಮೂಲಕ ಗೊನೆ ಮುಹೂರ್ತ ಕಾರ್ಯವನ್ನು ನೆರವೇರಿಸಿದರು.

ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಹೊಸಗದ್ದೆ, ಕಾರ್ಯದರ್ಶಿ ಸುಂದರ ಕುದ್ಪಾಜೆ, ಕೋಶಾಧಿಕಾರಿ ರಮೇಶ್ ಕೊಡಂಕೀರಿ, ಉಪಾಧ್ಯಕ್ಷ ಸುರೇಶ್ ನಾರಾಜೆ, ನೇಮೋತ್ಸವ ಸಮಿತಿ ಅದ್ಯಕ್ಷ ಸೋಮಶೇಖರ್ ದೋಳ, ಕಾರ್ಯದರ್ಶಿ ಪ್ರಸನ್ನ ಕೊಡಂಕಿರಿ, ಕೋಶಾಧಿಕಾರಿ ಪ್ರಶಾಂತ ಕೊಡಂಕೀರಿ, ರಮೇಶ್ ಇರಂತಮಜಲು,ಹಾಗೂ ದೈವಸ್ಥಾನದ ಪಾತ್ರಿಗಳು ಭಾಸ್ಕರ ನಾರಾಜೆ, ಬಾಬು ಕೊರಂಬಡ್ಕ, ಮೋಹನ್ ಹೊಸಗದ್ದೆ ಮತ್ತು ವ್ಯವಸ್ಥಾಪನ ಸಮಿತಿ ಹಾಗೂ ನೇಮೋತ್ಸವ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ವರದಿ : ಜೆಜೆಎಸ್

Comments are closed.