ATM: ಇನ್ಮುಂದೆ ATM ನಲ್ಲಿ ಬ್ಯಾಲನ್ಸ್ ಪರಿಶೀಲಿಸಿದರೂ ಬೀಳುತ್ತೆ ಶುಲ್ಕ!

ATM: ಪದೇ ಪದೇ ಎಟಿಎಂ ಬಳಸುವವರಾಗಿದ್ದರೆ ಈ ಮಾಹಿತಿ ತಿಳಿಯಿರಿ. ಇನ್ಮುಂದೆ ಎಟಿಎಂ ಇಂಟರ್ಚೇಂಜ್ ದರಗಳು (ATM Interchange Fees) ಹೆಚ್ಚಾಗಲಿವೆ. ಶುಲ್ಕಗಳ ಹೆಚ್ಚಳಕ್ಕೆ ಆರ್ಬಿಐ ಅನುಮೋದನೆ ನೀಡಿದೆ. ಮೇ 1ರಿಂದ ಹೊಸ ಶುಲ್ಕಗಳು ಜಾರಿಗೆ ಬರಲಿವೆ. ಬೇರೆ ಬ್ಯಾಂಕ್ಗಳ ಎಟಿಎಂಗಳಲ್ಲಿ ನಿಗದಿ ಮಾಡಿದ ಮಿತಿಗಿಂತ ಹೆಚ್ಚು ಸಂಖ್ಯೆಯಲ್ಲಿ ವಹಿವಾಟು ಮಾಡಿದರೆ ಆಗ ಪ್ರತೀ ಹೆಚ್ಚುವರಿ ವಹಿವಾಟಿಗೂ ಶುಲ್ಕ ವಿಧಿಸಲಾಗುತ್ತದೆ. ಕ್ಯಾಷ್ ಹಿಂಪಡೆಯುವ ವಹಿವಾಟು ಶುಲ್ಕವನ್ನು ಎರಡು ರೂ. ನಷ್ಟು ಹೆಚ್ಚಿಸಲಾಗಿದೆ. ಬ್ಯಾಲನ್ಸ್ ಪರಿಶೀನೆ, ಸ್ಟೇಟ್ಮೆಂಟ್ ಪಡೆಯುವುದು ಇತ್ಯಾದಿ ಹಣಕಾಸು ಅಲ್ಲದ ವಹಿವಾಟಿಗೆ ಶುಲ್ಕವನ್ನು ಒಂದು ರೂ.ನಷ್ಟು ಏರಿಸಲಾಗಿದೆ.
ಎಟಿಎಂ ಶುಲ್ಕ 17 ರೂನಿಂದ 19 ರೂಗೆ ಏರಿಕೆ:
ಎಲ್ಲಾ ಎಟಿಎಂಗಳಲ್ಲೂ ಯಾವುದೇ ಬ್ಯಾಂಕ್ನ ಎಟಿಎಂ ಬಳಸಲು ಅವಕಾಶ ಇರುತ್ತದೆ. ಹೀಗಾಗಿ, ಬಹಳ ಜನರು ಕಣ್ಣಿಗೆ ಸಿಕ್ಕ ಎಟಿಎಂಗೆ ಹೋಗಿ ಹಣ ವಿತ್ಡ್ರಾ ಮಾಡುವುದುಂಟು. ಆದರೆ, ಬೇರೆ ಬ್ಯಾಂಕ್ನ ಎಟಿಎಂಗೆ ಹೋಗಿ ಕಾರ್ಡ್ ಬಳಸಲು ನಿರ್ಬಂಧಗಳಿವೆ. ಒಂದು ತಿಂಗಳಲ್ಲಿ ಸಾಮಾನ್ಯವಾಗಿ 3 ರಿಂದ 5 ಬಾರಿ ಮಾತ್ರ ನೀವು ಬೇರೆ ಬ್ಯಾಂಕ್ ಎಟಿಎಂನಲ್ಲಿ ವಹಿವಾಟು ನಡೆಸಬಹುದು. ಅದನ್ನು ಮೀರಿದರೆ, ಆಗ ಆ ಬ್ಯಾಂಕ್ನವರು ನಿಮ್ಮ ಬ್ಯಾಂಕ್ಗೆ ಇಂಟರ್ಚೇಂಜ್ ಫೀ ವಿಧಿಸುತ್ತವೆ. ಆರ್ಬಿಐ ಇದೇ ಇಂಟರ್ಚೇಂಜ್ ಫೀ ಅನ್ನು ಈಗ ಹೆಚ್ಚಿಸಿರುವುದು.
ವಹಿವಾಟು ಸಂಖ್ಯೆ ಮಿತಿ ಮೀರಿದ ಬಳಿಕ ಪ್ರತಿಯೊಂದು ಕ್ಯಾಷ್ ವಿತ್ಡ್ರಾಲ್ಗೂ ಇಂಟರ್ಚೇಂಜ್ ಶುಲ್ಕ 17 ರೂನಿಂದ 19 ರೂ.ಗೆ ಹೆಚ್ಚಿಸಲಾಗಿದೆ. ನಾನ್ ಫೈನಾನ್ಷಿಯಲ್ ಟ್ರಾನ್ಸಾಕ್ಷನ್ಗೆ ಶುಲ್ಕವನ್ನು 6 ರೂ. ನಿಂದ 7 ರೂ.ಗೆ ಹೆಚ್ಚಿಸಲಾಗಿದೆ. ಮೇ 1ರಿಂದ ಈ ಹೊಸ ದರಗಳು ಜಾರಿಗೆ ಬರುತ್ತವೆ.
Comments are closed.