of your HTML document.

ತಿಂದ ತಕ್ಷಣ ಟಾಯ್ಲೆಟ್ ಗೆ ಹೋಗಬೇಕಾಗುತ್ತಾ? ಏಕೆ?   

ಊಟ ತಿಂಡಿಯ ನಂತರ ವಿಶಿಷ್ಟ ಸಮಸ್ಯೆ ಇರುವ ಎರಡು ಬಗೆಯ ಜನರು ಪ್ರಪಂಚದಲ್ಲಿ ಇದ್ದಾರೆ. ಒಂದು – ಊಟ ಮಾಡಿದ ತಕ್ಷಣ ನಿದ್ರೆಗೆ ಜಾರುತ್ತಾರೆ ಮತ್ತು ಎರಡನೆಯ ಬಗೆಯ ಜನ ತಿಂದ ಕೂಡಲೇ ಶೌಚಾಲಯಕ್ಕೆ ಓಡುತ್ತಾರೆ. ಮೊದಲ ವರ್ಗದ ಜನರ ಹೆಚ್ಚು ಚಿಂತಿಸಲು ಯಾವುದೇ ಕಾರಣವಿಲ್ಲ. ಆದರೆ, ಎರಡನೇ ಬಗೆಯವರು ಸ್ವಲ್ಪ ಜಾಗೃತರಾಗುವುದು ಅಗತ್ಯ. ತಿಂದ ನಂತರ ಪದೇಪದೇ ಶೌಚಾಲಯಕ್ಕೆ ಹೋಗಬೇಕಾದರೆ, ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾದ ಸಮಯ.

ತಜ್ಞರ ಪ್ರಕಾರ, ಅಕಾಲಿಕ ಶೌಚಕ್ಕೆ ಹೋಗುವ ಅಭ್ಯಾಸವು ಮುಂದೆ ನಿಮ್ಮನ್ನು ಬಹಳಷ್ಟು ತೊಂದರೆಗೆ ಸಿಲುಕಿಸಬಹುದು. ಆದ್ದರಿಂದ, ತಿಂದ ನಂತರ ತಕ್ಷಣವೇ ಶೌಚಕ್ಕೆ ಹೋಗಬೇಕಾದ ಅನಿವಾರ್ಯತೆ ಏಕೆ ಉಂಟಾಗುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಅವಶ್ಯಕ.

ಆಹಾರ

ಶೌಚಕ್ಕೆ ಹೋಗುವ ಅಭ್ಯಾಸವು ವ್ಯಕ್ತಿಯ ಆಹಾರಕ್ರಮವನ್ನು ಅವಲಂಬಿಸಿರುತ್ತದೆ. ನಿರಂತರವಾಗಿ ಮಸಾಲೆಯುಕ್ತ ಆಹಾರವನ್ನು ತಿನ್ನುವುದು ಮತ್ತು ಹಸಿ ಸಲಾಡ್ ಅಧಿಕ ಪ್ರಮಾಣದಲ್ಲಿ ತಿನ್ನುವುದು ಪದೇ ಪದೇ ಶೌಚಾಲಯಕ್ಕೆ ಹೋಗಲು ಕಾರಣವಾಗಬಹುದು. ಹೆಚ್ಚಿನ ಫೈಬರ್ ಸೇವನೆಯು ಕರುಳಿನ ಸಡಿಲ ಚಲನೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಫೈಬರ್ ಅಂಶ ಹೆಚ್ಚಿರುವುದರಿಂದ ಪದೇ ಪದೇ ಶೌಚಕ್ಕೆ ಹೋಗಬೇಕಾಗುತ್ತಿದ್ದರೆ ಆಹಾರದಲ್ಲಿ ನಾರಿನಂಶವನ್ನು ಕಡಿಮೆ ಮಾಡುವ ಮೂಲಕ ಸುಲಭವಾಗಿ ನಿಯಂತ್ರಿಸಬಹುದು. ಆದರೆ, ಮಸಾಲೆಯುಕ್ತ ಆಹಾರದಿಂದಾಗಿ ಶೌಚಾಲಯಕ್ಕೆ ಭೇಟಿ ನೀಡಬೇಕಾಗುತ್ತದೆ ಚಿಂತೆಗೆ ಕಾರಣವಾಗುತ್ತವೆ. ಏಕೆಂದರೆ, ಇದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಆಹಾರ ಅಲರ್ಜಿ

ಕೆಲವರಿಗೆ ವಿಭಿನ್ನ ಅಥವಾ ವಿಶಿಷ್ಟ ಆಹಾರಗಳ ಅಲರ್ಜಿ ಇರುತ್ತದೆ. ಅಲರ್ಜಿ ಇರುವವರು ಈ ಆಹಾರಗಳನ್ನು ಜೀರ್ಣಿಸಿಕೊಳ್ಳುವುದಿಲ್ಲ, ಇದರಿಂದಾಗಿ ಶೌಚಾಲಯಕ್ಕೆ ಹಾಗಾಗಿ ಭೇಟಿ ನೀಡಬೇಕಾದ ಅಗತ್ಯ ಉಂಟಾಗುತ್ತದೆ. ಇವುಗಳಲ್ಲಿ ಮೀನು, ಹಾಲು, ಬೀಜಗಳು, ಮೊಟ್ಟೆಗಳು ಸೇರಿವೆ.

ಕೆರಳುವ ಕರುಳಿನ ಸಹಲಕ್ಷಣಗಳು ( ಇರ್ರಿಟೇಬಲ್ ಬೋವೆಲ್ ಸಿಂಡ್ರೋಮ್)

ಇದೊಂದು ದೊಡ್ಡ ಕರುಳಿನ ಕಾಯಿಲೆ. ಹೊಟ್ಟೆನೋವು, ಚಡಪಡಿಕೆ ಮುಂತಾದ ಲಕ್ಷಣಗಳು ಇದರಲ್ಲಿ ಎದುರಾಗುತ್ತವೆ. ಈ ಕಾಯಿಲೆಯಲ್ಲಿ, ಆಹಾರವು ಹೊಟ್ಟೆಯನ್ನು ಪ್ರವೇಶಿಸಿದ ತಕ್ಷಣ, ಕರುಳುಗಳು ಅದನ್ನು ಸಹಿಸುವುದಿಲ್ಲ. ಆದ್ದರಿಂದ, ಕರುಳಿನ ಚಲನೆಯು ವೇಗವಾಗಿ ಹೆಚ್ಚಾಗುತ್ತದೆ ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳುವ ಮೊದಲು ಹೊರಹಾಕುತ್ತದೆ. ಇದು ಪದೇ ಪದೇ ಶೌಚಕ್ಕೆ ಹೋಗಲು ಕಾರಣವಾಗುತ್ತದೆ. ಇದು ದೀರ್ಘಕಾಲದ ಕಾಯಿಲೆಯಾಗಿದ್ದು, ಇದು ದೀರ್ಘಕಾಲದವರೆಗೆ ಮುಂದುವರಿದರೆ, ಇದು ಅನೇಕ ಪೋಷಕಾಂಶಗಳ ಕೊರತೆ ಮತ್ತು ಅದಕ್ಕೆ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು.

ಡಾ.ಪ್ರ. ಅ. ಕುಲಕರ್ಣಿ

Comments are closed.