Sullia: ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ಹಾಸ್ಟೆಲ್ ವಾರ್ಡನ್ ಗೆ ಜಾಮೀನು ಮಂಜೂರು

Share the Article

Sullia: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಒಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡನಿಗೆ ಇದೀಗ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಫೆ.27ರಂದು ಸುಳ್ಯದ ಡೆಂಟಲ್‌ ಕಾಲೇಜಿನಲ್ಲಿ 2ನೇ ವರ್ಷದ ವಿದ್ಯಾರ್ಥಿನಿ ಬೆಳಗಾವಿಯ ಕೃತಿಕಾ ನಿಡ್ಡೋಣಿ ಎಂಬವರು ಹಾಸ್ಟೆಲ್‌ನಲ್ಲಿ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದರು. ಈ ವೇಳೆ ಕೃತಿಕಾ ತಂದೆ ಅವರು ‘ನವೀನ್ ಎಂಬ ಹುಡುಗನೊಬ್ಬ ಮಗಳಿಗೆ ಕರೆ ಮಾಡಿ, ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ನಿನ್ನ ತಂದೆಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಹೀಗಾಗಿ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಳು. ಈ ವಿಚಾರ ಹಾಸ್ಟೆಲ್ ವಾರ್ಡನ್ ತಾರಾ ಕುಮಾರಿಗೆ ತಿಳಿದಿದ್ದರೂ ಅವರು ಸುಮ್ಮನಿದ್ದರು. ಯಾವುದೇ ರೀತಿ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಿ ವಾರ್ಡನ್ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ತಾರಾಕುಮಾರಿ ನಿರೀಕ್ಷಣ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧಿಧೀಶೆ ಸರಿತಾ ಡಿ. ಅವರು ಅರೋಪಿ ತಾರಾಕುಮಾರಿಗೆ ಶರ್ತಬದ್ಧ ಜಾಮೀನು ನೀಡಿದ್ದಾರೆ.

Comments are closed.