of your HTML document.

Belthangady: ಬೆಳ್ತಂಗಡಿ: ದೊಡ್ಡಮ್ಮನ ಮಗನಿಂದಲೇ ಬಾಲಕಿಗೆ ಲೈಂಗಿಕ ಕಿರುಕುಳ!

Belthangady: ಬಾಲಕಿಗೆ ದೊಡ್ಡಮ್ಮನ ಮಗನೇ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳ್ತಂಗಡಿ (Belthangady) ತಾಲೂಕು ಸುರಿಮೊಗ್ರು ಗ್ರಾಮದಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.

ಸುಕ್ಕೇರಿ ಮೊಗ್ರು ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಯೊಬ್ಬರಿಗೆ ತನ್ನ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳವಾದ ಬಗ್ಗೆ ಮಾಹಿತಿ ಸಿಕ್ಕಿದ್ದು, ಅವರು ಬಾಲಕಿ ಯನ್ನು ವಿಚಾರಣೆ ನಡೆಸಿ ದಾಗ ದೊಡ್ಡಮ್ಮನ ಮಗನು ದೇವರ ಗುಡ್ಡೆಯ ಮನೆಯಲ್ಲಿ ಹಾಗೂ ಮೂರು ಸಲ ಕುತ್ತೂರಿನ ಅಜ್ಜನ ಮನೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ತಿಳಿಸಿದ್ದಳು. ಬಳಿಕ ಬಾಲಕಿಗೆ ತಾಯಿಗೆ ತಿಳಿಸಲಾಗಿದ್ದು, ವೇಣೂರು ಪೊಲೀಸ್‌ ಠಾಣೆಯಲ್ಲಿ ಮಾ.26ರಂದು ದೂರು ದಾಖಲಿಸಲಾಗಿದೆ.

Comments are closed.