Madhu Bangarappa : 1ನೇ ತರಗತಿಗೆ 6 ವರ್ಷ ಕಡ್ಡಾಯ ಬೇಡ ಎಂದು ಮನವಿ – ಪೋಷಕರ ಮೇಲೆ ಸಚಿವ ಮಧು ಬಂಗಾರಪ್ಪ ದರ್ಪ

Madhu Bangarappa : ಮಕ್ಕಳನ್ನು 1ನೇ ತರಗತಿಗೆ ಸೇರಿಸಲು 6 ವರ್ಷ ಕಡ್ಡಾಯ ಬೇಡ ಎಂದು ಮನವಿ ಮಾಡಲು ತಮ್ಮ ನಿವಾಸದ ಬಳಿ ಬಂದಿದ್ದ ಪೋಷಕರ ಮೇಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ದರ್ಪ ತೋರಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿ ದಾಖಲಾತಿಯಲ್ಲಿ ವಯೋಮಿತಿ ಗೊಂದಲ ವಿಚಾರವಾಗಿ ಶಿಕ್ಷಣ ಸಚಿವರನ್ನು ಭೇಟಿ ಮಾಡಲು ನೂರಾರು ಪೋಷಕರು ಬಂದಿದ್ದರು. ಈ ವೇಳೆ ಮಾಧ್ಯಮದವರನ್ನು ಕಂಡ ಶಿಕ್ಷಣ ಸಚಿವ, ನನ್ನ ನಿವಾಸದ ಬಳಿ ಮೀಡಿಯಾದವರನ್ನ ಯಾಕೆ ಕರೆದುಕೊಂಡು ಬಂದಿದ್ದೀರಾ..? ಹಾಗಿದ್ದರೆ ನಿಮ್ಮ ಸಮಸ್ಯೆಯನ್ನು ಅವರ ಬಳಿಯೇ ಮಾತಾಡಿ ಎಂದು ಪೋಷಕರ ವಿರುದ್ಧ ಕಿಡಿಕಾರಿದ್ದಾರೆ.ಇದೇ ವೇಳೆ ಪೋಷಕರ ಜೊತೆ ಮಾಧ್ಯಮದವರು ಈ ರೀತಿ ಬಂದಿರುವುದು ರಬ್ಬೀಶ್ ಅಂತ ಹೇಳಿದ್ದಾರೆ.
ಆ ನಂತರ ಈ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅಲರ್ಟ್ ಆದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ನಾನು ಹೇಳಿದ್ದು ಪೋಷಕರಿಗೆ, ಮಾಧ್ಯಮಗಳಿಗೆ ಅಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
Comments are closed.