Viral Video : ಹಸುವನ್ನು ಓಡಿಸಿಕೊಂಡು ಬಂದು ಮನೆಯೊಂದರ ಬೆಡ್ ರೂಮ್ ಗೆ ನುಗ್ಗಿದ ಗೂಳಿ!! ಮುಂದೇನಾಯ್ತು?

Viral Video : ಹಸು ಒಂದನ್ನು ಅಟ್ಟಾಡಿಸಿಕೊಂಡು ಬಂದ ಗೂಳಿ ಸೀದಾ ಮನೆಯೊಂದರ ಬೆಡ್ರೂಮ್ ಗೆ ನುಗ್ಗಿದ ವಿಚಿತ್ರ ಘಟನೆ ಎಂದು ಹರಿಯಾಣದಲ್ಲಿ ನಡೆದಿದೆ. ಈ ಮೂಲಕ ಮನೆಗೆ ವಿಶೇಷ ಅತಿಥಿಗಳ ಆಗಮನವಾಗಿದೆ.
#फरीदाबाद में बुधवार को गाय और सांड एक घर में घुस गए।महिला ने आलमारी में 2 घंटे तक छिपकर अपनी जान बचाई। बड़ी मुश्किल से पशुओं को घर से निकाला जा सका।#faridabad pic.twitter.com/TxpvmKnQ01
— ITM MEDIA 24 (@itmmedia24) March 27, 2025
ಹೌದು, ಹರಿಯಾಣದ ಫರಿದಾಬಾದ್‌ನ ಮನೆಯೊಂದರ ಮಲಗುವ ರೂಂಗೆ ಒಂದು ಗೂಳಿ ಮತ್ತು ಹಸು ನುಗ್ಗಿದೆ. ಬಳಿಕ ಅವುಗಳನ್ನು ಪಟಾಕಿಸಿಡಿಸಿ ಮನೆಯಿಂದ ಓಡಿಸಿದ ಘಟನೆ ನಡೆದಿದೆ. ಸಧ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಂದಹಾಗೆ ತನ್ನನ್ನು ಗೂಳಿ ಅಟ್ಟಿಸಿಕೊಂಡು ಬರುವಾಗ ಹಸುವು ಬಚಾವಾಗಲು ಸೀದಾ ಬೆಡ್ರೂಮ್ ಗೆ ನುಗ್ಗಿದೆ. ಹಸುವನ್ನು ಓಡಿಸಿಕೊಂಡು ಬಂದ ಗೂಳಿಯೂ ಸೀದಾ ಬೆಡ್ ರೂಂಗೆ ಓಡಿದೆ. ಈ ವಿಚಾರವನ್ನು ತಿಳಿದ ಅಕ್ಕಪಕ್ಕದ ಮನೆಯವರು ಗೂಳಿ- ಹಸುಗಳನ್ನು ಓಡಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ ಎರಡೂ ಸುಮಾರು 1 ಗಂಟೆ ಬೆಡ್ ರೂಂನಲ್ಲಿಯೇ ಇದ್ದವು. ನಂತರ ಪಟಾಕಿ ಸಿಡಿಸಿ ಅವುಗಳನ್ನು ಓಡಿಸಲಾಗಿದೆ.
Comments are closed.