of your HTML document.

Lucknow: ಬೇರೆ ಪುರುಷರ ಜೊತೆ ಮಾತನಾಡಬೇಡ ಎಂದ ಗಂಡನಿಗೆ ಕಾಫಿಯಲ್ಲಿ ವಿಷ ಬೆರೆಸಿ ನೀಡಿದ ಪತ್ನಿ!

Lucknow: ಬೇರೆ ಪುರುಷರ ಜೊತೆ ಮಾತನಾಡಬೇಡ ಎಂದು ಪತಿ ಹೇಳಿದ್ದಕ್ಕೆ ಪತ್ನಿ ಆತ ಕುಡಿಯುವ ಕಾಫಿಗೆ ವಿಷ ಹಾಕಿ ಕೊಲೆಗೆ ಯತ್ನ ಮಾಡಿರುವ ಘಟನೆ ಆಗ್ರಾದ ಮುಜಾಫರ್‌ನಗರದಲ್ಲಿ ನಡೆದಿದೆ.

ಖಾಟೌಲಿಯ ನಿವಾಸಿ ಅನುಜ್‌ ಕಾಫಿ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಎರಡು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ಬಾಳಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು. ಪತ್ನಿಗೆ ಪರ ಪುರುಷರ ಜೊತೆ ಮಾತನಾಡಬೇಡ ಎಂದಿದ್ದಕ್ಕೆ ಇವರಿಬ್ಬರ ಮಧ್ಯೆ ಗುರುವಾರ ಜಗಳ ಪ್ರಾರಂಭವಾಗಿದೆ.

ಅನಂತರ ಆತ ಕುಡಿಯುವ ಕಾಫಿಗೆ ವಿಷ ಬೆರೆಸಿ ನೀಡಿದ್ದಾಳೆ. ಅನುಜ್‌ಗೆ ಸ್ವಲ್ಪ ಹೊತ್ತಲ್ಲೇ ಅನಾರೋಗ್ಯ ಕಾಡಿದೆ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅನುಜ್‌ ಕುಟುಂಬದವರು ಖಟೌಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Comments are closed.