of your HTML document.

Ramzan: ರಂಜಾನ್‌ ಮುನ್ನ ಕ್ಷಮಾದಾನ ನೀಡಿದ ಯುಎಇ; 500 ಕ್ಕೂ ಹೆಚ್ಚು ಭಾರತೀಯರ ಬಿಡುಗಡೆ!

Abudabi: ರಂಜಾನ್‌ಗೆ ಮುನ್ನ ಯುಎಇ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ 1295 ಕೈದಿಗಳನ್ನು ಕ್ಷಮಾದಾನ ನೀಡುವ ಮೂಲಕ ಬಿಡುಗಡೆಗೆ ಆದೇಶಿಸಿದೆ. ಪ್ರಧಾನಿ ಶೇಖ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಕ್ತೌಮ್‌ 1518 ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ.

ಕ್ಷಮಾದಾನ ಪಡೆದವರಲ್ಲಿ 500 ಕ್ಕೂ ಹೆಚ್ಚು ಕೈದಿಗಳು ಭಾರತೀಯ ಪ್ರಜೆಗಳು ಎಂದು ಅಧಿಕೃತ ಆದೇಶದಲ್ಲಿ ವರದಿಯಾಗಿದೆ.

ಕ್ಷಮಾದಾನದ ನಂತರ, ದುಬೈ ಪಬ್ಲಿಕ್‌ ಪ್ರಾಸಿಕ್ಯೂಷನ್‌, ದುಬೈ ಪೊಲೀಸರೊಂದಿಗೆ ಸಮನ್ವಯದಿಂದ ಅವರ ಬಿಡುಗಡೆಗಾಗಿ ಕಾನೂನು ಕಾರ್ಯವಿಧಾನಗಳನ್ನು ಜಾರಿಗೆ ತರುವ ಕೆಲಸ ಪ್ರಾರಂಭಿಸಿದೆ ಎಂದು ಅಟಾರ್ನಿ ಜನರಲ್‌ ದೃಢಪಡಿಸಿದೆ.

Comments are closed.