of your HTML document.

Anekal: ಕೊಲೆ ಮಾಡಿ ಪತ್ನಿಯ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ನಲ್ಲಿಟ್ಟ ಟೆಕ್ಕಿ ಪತಿ; ಹಂತಕ ಅರೆಸ್ಟ್‌!

Anekal: ಸಾಫ್ಟ್‌ವೇರ್‌ ಗಂಡನೋರ್ವ ತನ್ನ ಹೆಂಡತಿಯ ಕೊಲೆ ಮಾಡಿ ಸೂಟ್‌ಕೇಸ್‌ಗೆ ತುಂಬಿ ಪುಣೆಯಲ್ಲಿ ಅರೆಸ್ಟ್‌ ಆಗಿದ್ದಾನೆ.

ಗೌರಿ ಅನಿಲ್‌ ಸಾಂಬೇಕರ್‌ ಕೊಲೆಯಾದ ಮಹಿಳೆ.

ಮಾಸ್‌ ಕಮ್ಯುನಿಕೇಷನ್‌ನಲ್ಲಿ ಡಿಗ್ರಿ ಮಗಿಸಿದ್ದ ಮಹಿಳೆ, ಎರಡು ವರ್ಷದ ಹಿಂದೆ ರಾಕೇಶ್‌ನನ್ನು ವಿವಾಹವಾಗಿದ್ದಳು. ಸಾಫ್ಟ್‌ವೇರ್‌ ಕಂಪನಿಯಲ್ಲಿ ಪ್ರಾಜೆಕ್ಟ್‌ ಮ್ಯಾನೇಜರ್‌ ಆಗಿದ್ದ ರಾಕೇಶ್‌ ವರ್ಕ್‌ ಫ್ರಂ ಹೋಮ್‌ ಕೆಲಸ ಮಾಡುತ್ತಿದ್ದ. ಇವರಿಬ್ಬರೂ ಮಹಾರಾಷ್ಟ್ರ ಮೂಲದವರು. ಒಂದು ತಿಂಗಳ ಹಿಂದೆ ಹುಳಿಮಾವು ಪೊಲೀಸ್‌ ಠಾಣಾ ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯ ಬಾಡಿಗೆಯಲ್ಲಿದ್ದರು.

ನಿನ್ನೆ ಸಂಜೆ ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿಗೆ ಕರೆ ಮಾಡಿ ಈತ ಹೆಂಡ್ತಿಯನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿಟ್ಟಿರೋದಾಗಿ ಹೇಳಿದ್ದ. ಕೂಡಲೇ ಮಾಲಿಕರಿಗೆ ಇವರು ಕರೆ ಮಾಡಿ ತಿಳಿಸಿದ್ದರು. ಘಟನಾ ಸ್ಥಳಕ್ಕೆ ಎಫ್‌ಎಸ್‌ಎಲ್‌ ಟೀಂ, ಸೋಕೋ ಟೀಂ ಜೊತೆ ಹುಳಿಮಾವು ಪೊಲೀಸರು ಬಂದು ತನಿಖೆ ಮಾಡಿದಾಗ, ಇದೊಂದು ಕೊಲೆ ಪ್ರಕರಣ ಎಂದು ತಿಳಿದು ಬಂದಿದೆ.

ಮೊನ್ನೆ ರಾತ್ರಿ ಊಟದ ಹೊತ್ತಲ್ಲಿ ಗಂಡ ಹೆಂಡತಿ ನಡುವೆ ಗಲಾಟಯಾಗಿದ್ದು, ಈ ವೇಳೆ ಹೆಂಡತಿ ಕೊಲೆ ಮಾಡಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಪುಣೆಯ ಶಿರವಾಲ್‌ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ. ಹುಳಿಮಾವು ಪೊಲೀಸರು ಪುಣೆ ರೀಚ್‌ ಆಗಿದ್ದು, ಆರೋಪಿಯನ್ನು ಕರೆತರುತ್ತಿದ್ದಾರೆ.

ಮೃತ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಲಾಗಿದೆ. ಹಾಗೆ ಪೋಷಕರಿಗೂ ಸುದ್ದಿ ಮುಟ್ಟಿಸಿದ್ದಾರೆ.

ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Comments are closed.