Ramzan: ರಸ್ತೆಯಲ್ಲಿ ನಮಾಜ್‌ ಮಾಡಿದರೆ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್‌ ರದ್ದು!

Ramzan: ಈದ್‌-ಉಲ್‌-ಫಿತರ್‌ ಮತ್ತು ರಂಜಾನ್‌ ಕೊನೆಯ ಶುಕ್ರವಾರದಂದು ರಸ್ತೆಗಳಲ್ಲಿ ನಮಾಜ್‌ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶದ ಮೀರತ್‌ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ.

ರಸ್ತೆಗಳಲ್ಲಿ ನಮಾಜ್‌ ಮಾಡಿದರೆ ಪಾಸ್‌ಪೋರ್ಟ್‌ ಹಾಗೂ ಚಾಲನಾ ಪರವಾನಗಿಯನ್ನೂ ರದ್ದುಗೊಳಿಸಬಹುದು ಎಂದು ಮೀರತ್‌ ಪೊಲೀಸ್‌ ಅಧೀಕ್ಷಕ ಆಯುಷ್‌ ವಿಕ್ರಮ್‌ ಸಿಂಗ್‌ ಎಚ್ಚರಿಸಿದ್ದಾರೆ. ಹಾಗೆನೇ ಸ್ಥಳೀಯ ಮಸೀದಿಗಳು, ಗೊತ್ತುಪಡಿಸಿದ ಈದ್ಗಾಗಳಲ್ಲಿ ಈದ್‌ ಪ್ರಾರ್ಥನೆ ಸಲ್ಲಿಸಬೇಕು. ಯಾರೂ ರಸ್ತೆಗಳಲ್ಲಿ ನಮಾಜ್‌ ಮಾಡಬಾರದು ಎಂದು ಹೇಳಿದ್ದಾರೆ.

Comments are closed.