of your HTML document.

Nandini Milk Price: ನಂದಿನಿ ಹಾಲಿನ ದರ ಹೆಚ್ಚಳ; ಸಿಎಂ ಸಮರ್ಥನೆ!

Nandini Milk Price: ನಂದಿನಿ ಹಾಲಿನ ದರ ಲೀ.ಗೆ 4 ರೂ. ಹೆಚ್ಚಳ ಮಾಡಿದ ಕುರಿತು ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.

ಮುಂಬರುವ ಏಪ್ರಿಲ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರವು ₹4 ಹೆಚ್ಚಳವಾಗಲಿದ್ದು, ಇದರಲ್ಲಿ ಸರ್ಕಾರ ಅಥವಾ ಕೆಎಂಎಫ್ ಸಂಸ್ಥೆಗೆ ಲಾಭ ಗಳಿಕೆ ಮಾಡಿಕೊಡುವ ಯಾವುದೇ ಉದ್ದೇಶವಿಲ್ಲ. ಇಲ್ಲಿ ಏರಿಕೆಯಾಗುವ ದರದ ಲಾಭವು ರೈತರನ್ನು ತಲುಪಲಿದೆ. ದರ ಏರಿಕೆಯ ನಂತರವೂ ಒಂದು ಲೀಟರ್ ಹಾಲಿನ ಬೆಲೆ ₹46 ಆಗಲಿದ್ದು, ಇದು ಬೇರೆಲ್ಲಾ ರಾಜ್ಯಗಳಿಗಿಂತಲೂ ಕಡಿಮೆಯಿರಲಿದೆ.

ನಾಡಿನ‌ ಲಕ್ಷಾಂತರ ಹೈನುಗಾರರ ಬದುಕಿಗೆ ಬಲ ತುಂಬುವ ಏಕೈಕ ಉದ್ದೇಶದ ಈ ಪ್ರಯತ್ನಕ್ಕೆ ಸಾರ್ವಜನಿಕರು ಬೆಂಬಲವಾಗಿ ನಿಲ್ಲುತ್ತೀರೆಂಬ ವಿಶ್ವಾಸ ನಮಗಿದೆ.

Comments are closed.