of your HTML document.

Telangana: ಹಸುಗೂಸನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ!

Telangana: ಮಹಿಳೆಯೊಬ್ಬರು ತನ್ನ 14 ದಿನದ ಹೆಣ್ಣು ಶಿಶುವನ್ನು ನೀರಿನ ಬಕೆಟ್‌ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮಾ.11 ರಂದು ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಂತರ ವಾಪಾಸ್‌ ಮನೆಗೆ ಬಂದ ಬಳಿಕ ಆಕೆಯ ಪತಿ ಮೂತ್ರಪಿಂಡ ವೈಫಲ್ಯ ಸೇರಿ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

ಮಹಿಳೆಗೆ ಒಂದು ಕಡೆ ಮಗು, ಪತಿ ಇಬ್ಬರನ್ನೂ ನೋಡಿಕೊಳ್ಳಲು ಕಷ್ಟ ಆಗುತ್ತಿತ್ತು.

ನಾಲ್ಕು ವರ್ಷದ ಹಿಂದೆ ಈ ದಂಪತಿಗಳು ತಮ್ಮ ಮಗನ ಜೊತೆ ತಮಿಳುನಾಡಿನಿಂದ ಹೈದ್ರಾಬಾದ್‌ಗೆ ಬಂದು ನೆಲೆಸಿದ್ದರು. ಈ ಸಂದರ್ಭದಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಾ.25 ರಂದು ಮಹಿಳೆ ಸ್ನಾನಕ್ಕೆ ಹೋಗಿದ್ದ ವೇಳೆ ಮಗುವನ್ನು ನೀರಿನ ಬಕೆಟ್‌ಗೆ ಮುಳುಗಿಸಿ ಕೊಲೆ ಮಾಡಿದ್ದಾರೆ.

ಅನಂತರ ಅಪರಿಚಿತ ವ್ಯಕ್ತಿ ಈ ರೀ ಮಾಡಿದ್ದು ಎಂದು ಕತೆ ಹೇಳಿದ್ದಾಳೆ. ಪೊಲೀಸ್‌ ತನಿಖೆ ವೇಳೆ ಮಹಿಳೆ ನಿಜ ಹೇಳಿದ್ದಾಳೆ. ವಿಚಾರಣೆ ವೇಳೆ ಮಗುವನ್ನು ಹೇಗೆ ನೋಡಿಕೊಳ್ಳಬೇಕೆಂದು ನನಗೆ ತಿಳಿದಿಲ್ಲ. ಹಾಗಾಗಿ ನಾನೇ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾಳೆ.

ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾರುಪಡಿಸಲಾಗಿದೆ.

Comments are closed.