Medical collage: ಕೊಡಗು ಮೆಡಿಕಲ್ ಕಾಲೇಜ್: ಸದ್ಯದಲ್ಲಿ ಹೃದ್ರೋಗ ಚಿಕಿತ್ಸೆ ಲಭ್ಯ – ಡಾ ಮಂತರ್ ಗೌಡ ಮಾಹಿತಿ

Medical collage: ಕೊಡಗು(Kodagu) ವೈದ್ಯಕೀಯ ವಿಜ್ಞಾನ ಸಂಸ್ಥೆ( ಕೊಡಗು ಜಿಲ್ಲಾ ಆಸ್ಪತ್ರೆ, ಮಡಿಕೇರಿ) ಯಲ್ಲಿ ಸದ್ಯದಲ್ಲಿಯೇ ಹೃದ್ರೋಗ ಚಿಕಿತ್ಸೆ(Cardiology) ಲಭ್ಯವಾಗಲಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ(MLA Dr Manthar gowda) ಮಾಹಿತಿ ನೀಡಿದ್ದಾರೆ.
ಕಾಲೇಜು ಸ್ಥಾಪನೆಯಾಗಿ 10 ವರ್ಷ ಪೂರೈಸಿದ ಹಿನ್ನಲೆಯಲ್ಲಿ ” ಅವೆನ್ಸಿಸ್ 2025″ ಎಂಬ ಬೃಹತ್ ಅರೋಗ್ಯ ಪ್ರದರ್ಶನ ಮೇಳ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಕೊಡಗು ಜಿಲ್ಲಾ ಆಸ್ಪತ್ರೆ ಯನ್ನು ಅತ್ಯಂತ ಸುಸಜ್ಜಿತ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ತಾವು ಬದ್ದರಾಗಿದ್ದು ಪ್ರಸ್ತುತ ಹೃದ್ರೋಗ ಚಿಕಿತ್ಸೆ ಕೇಂದ್ರ ಸ್ಥಾಪನೆಗೆ ಸರ್ಕಾರ ಒಪ್ಪಿದೆ ಎಂದು ತಿಳಿಸಿದರು.
ಮೆಡಿಕಲ್ ವಿಧ್ಯಾರ್ಥಿಗಳ ಕಲಿಕೆಗೆ ಆರೋಗ್ಯ ಪ್ರದರ್ಶನ ಮೇಳ ಅತ್ಯಂತ ಅಗತ್ಯ ಕಾರ್ಯಕ್ರಮವಾಗಿದ್ದು ಸಾರ್ವಜನಿಕರು ಕೂಡ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಸರಾ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ತೆನ್ನಿರ ಮೈನಾ ರವರು ಮಾತನಾಡಿ ಜನರ ಆರೋಗ್ಯ ದ ಬಗ್ಗೆ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದ ಮೆಡಿಕಲ್ ಕಾಲೇಜಿನ ಆಡಳಿತ ವರ್ಗ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು. ಮೆಡಿಕಲ್ ಕಾಲೇಜ್ ಸ್ಥಾಪನೆಯಾಗಿ ಹತ್ತು ವರ್ಷ ತುಂಬಿದ್ದರೂ ಡಾ ಮಂತರ್ ಗೌಡ ರವರು ಶಾಸಕರಾಗಿ ಆಯ್ಕೆಗೊಂಡ ನಂತರ ಆಸ್ಪತ್ರೆಯಲ್ಲಿ ಅಮೂಲಾಗ್ರ ಅಭಿವೃದ್ಧಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಮೆಡಿಕಲ್ ಕಾಲೇಜ್ ನಿರ್ದೇಶಕರಾದ ಡಾ ಲೋಕೇಶ್ ರವರು ಮಾತನಾಡಿ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಆರೋಗ್ಯ ಕ್ಕೆ ಸಂಭಂದಿಸಿದ ಉಪಯುಕ್ತ ಕಾರ್ಯಕ್ರಮ ನೀಡಲಾಗುವುದು ಎಂದು ವಿವರಿಸಿದರು.
ಹೆಚ್.ಒ.ಡಿ ಡಾ ಪುರುಷೋತ್ತಮ ರವರು ಮಾತನಾಡಿ ಮೆಡಿಕಲ್ ಕಾಲೇಜಿನ ವಿಚಾರದಲ್ಲಿ ಶಾಸಕರಾದ ಡಾ ಮಂತರ್ ಗೌಡ ರವರು ಸಂಪೂರ್ಣ ನೆರವು ನೀಡುತ್ತಿದ್ದು ಅದಕ್ಕೆ ಸಂಸ್ಥೆ ಅಭಾರಿಯಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯ ಮುಖ್ಯಸ್ಥರಾದ ಡಾ ವಿಶಾಲ್, ಹೊದ್ದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹೆಚ್.ಎ.ಹಂಸ
ಡಾ ಸೋಮಶೇಖರ್, ಡಾ ಮಂಜುನಾಥ್, ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ರೋಹಿಣಿ,
ಮಾಜಿ ನಗರ ಸಭಾ ಸದಸ್ಯರಾದ ಕೆ.ಜಿ.ಪೀಟರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ಪುಲಿಯಂಡ ಜಗದೀಶ್, ಪ್ರಭು ರೈ, ವಿ.ಜಿ ಮೋಹನ್,
ಚಂದ್ರಶೇಖರ್,
ಕಾಲೇಜಿನ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಗಳು ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೆಡಿಕಲ್ ವಿಧ್ಯಾರ್ಥಿಗಳಾದ ಪೂರ್ಣ ಚಂದ್ರ, ಮನೋಜ್ ಶೇಖರ್, ಮಿಥುನ್ ಆರ್, ಪವನ್ ಎಸ್.ವಶಿಷ್ಠ, ನೇಹಾ, ಪುನೀತ್,ಕಾವ್ಯ ಗುಪ್ತಾ, ಸುರಯ್ಯಾ, ಅನುದೀಪ್, ಶಶಾಂಕ್ ವೈ, ನಾಜಿಯಾ ತಸ್ವೀನ್, ಮನು, ಪ್ರಜ್ಞಾ, ಜಹಾರಾ, ಲಿಖಿತಾ.ಬಿ.ಟಿ.
ಐಶ್ವರ್ಯ ರಾಜ್, ಭವಾನಿ ರೆಡ್ಡಿ, ತೃಪ್ತಿ, ಚಂದನ ಶ್ರೀ ರವರು ಕಾರ್ಯಕ್ರಮ ನಡೆಸಿಕೊಟ್ಟರು.
Comments are closed.