of your HTML document.

Mangaluru: ಅಕ್ರಮ ಗೋಸಾಗಾಟ; ಬಜರಂಗದಳ ಕಾರ್ಯಕರ್ತರಿಂದ ತಡೆ; 25 ಗೋವುಗಳ ರಕ್ಷಣೆ

Mangaluru: ಅಕ್ರಮ ಗೋಸಾಗಾಟ ಮಾಡುತ್ತಿದ್ದುದ್ದನ್ನು ಬಜರಂಗದಳ ಕಾರ್ಯಕರ್ತರು ತಡೆಯೊಡ್ಡಿರುವ ಘಟನೆ ನಗರದ ಹೊರವಲಯದ ಬಜಪೆ ಸುರಲ್ಪಾಡಿಯಲ್ಲಿ ಶುಕ್ರವಾರ (ಮಾ.28) ರಂದು ನಡೆದಿದೆ.

ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯ ಆಧಾರದಲ್ಲಿ ವಾಹನವನ್ನು ತಡೆದು ಪರಿಶೀಲನೆ ಮಾಡಿದಾಗ ಗೂಡ್ಸ್‌ ವಾಹನದಲ್ಲಿ ಕಾಲುಗಳನ್ನು ಕಟ್ಟಿ ಅಮಾನುಷವಾಗಿ 25 ಗೋವುಗಳಿರುವುದು ಕಂಡು ಬಂದಿದೆ.

ಚಾಲಕ ಸ್ಥಳದಿಂದ ಪರಾರಿಯಾಗಿದ್ದಾಣೆ. ಗೋವುಗಳನ್ನು ರಕ್ಷಣೆ ಮಾಡಿದ ಕಾರ್ಯಕರ್ತಗರು ವಾಹನವನ್ನು ಪೊಲೀಸರಿಗೊಪ್ಪಿಸಿದ್ದಾರೆ.

ಈ ಘಟನೆ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.