of your HTML document.

Karnataka CM: ರಾಜ್ಯದ ಮುಂದಿನ ಸಿಎಂ ಇವರೇ – ಗೊರವಯ್ಯ ಸ್ಪೋಟಕ ಭವಿಷ್ಯ

Karnataka CM: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮನದ ನಡುವೆ ಮುಖ್ಯಮಂತ್ರಿ ಹುದ್ದೆಗಾಗಿ ಬಾರಿ ಪೈಪೋಟಿ ಏರ್ಪಟ್ಟಿದೆ. ಸಿದ್ದರಾಮಯ್ಯನನ್ನು ಬಿಟ್ಟರೆ ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಈ ನಡುವೆಯೇ ರಾಜ್ಯದ ಮುಂದಿನ ಸಿಎಂ ಯಾರಾಗುತ್ತಾರೆ ಎಂದು ಗೊರವಯ್ಯ ಅಚ್ಚರಿ ಭವಿಷ್ಯ ನುಡಿದಿದೆ.

ಹೌದು ಹಾಲುಮತದ ಗುರವಯ್ಯ ಮುಂದಿನ ಸಿಎಂ ಯಾರಾಗುತ್ತಾರೆ ಎಂಬುದಾಗಿ ಸ್ಪೋಟಕ ಭವಿಷ್ಯ ನೋಡಿದಿದ್ದು ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ.

ರಾಜ್ಯ ಗೃಹ ಸಚಿವರ ತುಮಕೂರು ಕಚೇರಿಗೆ ಆಕಸ್ಮಿಕವಾಗಿ ಆಗಮಿಸಿದ ಗೊರವಯ್ಯ, ಶೀಘ್ರದಲ್ಲೇ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬರಲಿದೆ ಎಂದು ಹೇಳಿದ್ದಾರೆ. ಆ ವೇಳೆ, ಪರಮೇಶ್ವರ್ ಅಲ್ಲಿ ಇರಲಿಲ್ಲ. ಹಾಲುಮತ ಸಮುದಾಯದ ಗೊರವಯ್ಯ ನುಡಿದ ಭವಿಷ್ಯ, ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.

Comments are closed.