of your HTML document.

Kodagu: ಒಂಟಿ ಮನೆಯಲ್ಲಿ ನಾಲ್ವರ ಭೀಕರ ಹತ್ಯೆ!

Madikeri: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಸಮೀಪ ಒಂಟಿ ಮನೆಯೊಂದರಲ್ಲಿ ನಾಲ್ವರನ್ನು ಕೊಲೆ ಮಾಡಲಾಗಿರುವ ಘಟನೆ ನಡೆದಿದೆ.

ಗೌರಿ (70), ಕಾಳ (75), ನಾಗಿ (30)ಹಾಗೂ ಕಾವೇರಿ (5) ಕೊಲೆಯಾದವರು.

ಏಳು ವರ್ಷಗಳ ಹಿಂದೆ ಗಿರೀಶ್‌ ಹಾಗೂ ನಾಗಿ ವಿವಾಹವಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೇರಳ ಮೂಲದ ಗಿರೀಶ್‌ (35) ಕೊಲೆ ಆರೋಪಿ, ಘಟನೆ ನಂತರ ಈತ ತಲೆ ಮರೆಸಿಕೊಂಡಿದ್ದಾನೆ.

ಗೌರಿ, ಕಾಳ ಎಂಬುವವರ ಮಗಳು ನಾಗಿ, ಪತಿ ಗಿರೀಶನ ಎಂಬಾತನೊಂದಿಗೆ ವಾಸವಿದ್ದರು. ಇವರ ಪುತ್ರ ಕಾವೇರಿ ಎನ್ನಲಾಗುತ್ತಿದೆ. ಗಿರೀಶ ನಾಪತ್ತೆಯಾಗಿದ್ದಾನೆ.

ಮಧ್ಯಾಹ್ನವಾದರೂ ಕೂಲಿ ಕೆಲಸಕ್ಕೆ ಬಂದಿಲ್ಲದಿರುವುದನ್ನು ಗಮನಿಸಿ ಮನೆಯ ಬಳಿ ಬಂದ ಇತರ ಕಾರ್ಮಿಕರಿಗೆ ದೃಶ್ಯ ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ದೌಡಾಯಿಸಿದ್ದಾರೆ.

Comments are closed.