Holiday: ಮಾ 31ರ ಈದ್ ರಜೆ ರದ್ದು – ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ!!

Holiday : ರಾಜ್ಯ ಸರ್ಕಾರವು ಮಾರ್ಚ್ 31ರ ಈದ್ ಹಬ್ಬದ ರಜೆಯನ್ನು ರದ್ದು. ಅಂದರೆ ಈ ಸರ್ಕಾರಿ ರಜೆಯನ್ನು ಪರಿವರ್ತಿತ ರಜೆಯಾಗಿ ಬದಲಾವಣೆ ಮಾಡಿಕೊಂಡಿದೆ.
ಹೌದು, ಹರಿಯಾಣ ಸರ್ಕಾರ ಈದ್ ರಜೆ ಬಗ್ಗೆ ದೊಡ್ಡ ತೀರ್ಮಾನ ಕೈಗೊಂಡಿದ್ದು ಮಾರ್ಚ್ 31, 2025ರ ಈದ್ ರಜೆಯನ್ನು ಸಂಪೂರ್ಣ ರಜೆ ಆಗದೆ, ನಿರ್ಬಂಧಿತ ರಜಾ (Restricted Holiday – RH) ಎಂದು ಪರಿವರ್ತಿಸಲಾಗಿದೆ. ಇದರಿಂದಾಗಿ ಸರ್ಕಾರಿ ನೌಕರರು ಈದ್ ದಿನ ರಜೆ ಬೇಕಾದರೆ ತೆಗೆದುಕೊಳ್ಳಬಹುದು, ಬೇಡವೆಂದರೆ ಕೆಲಸಕ್ಕೆ ಹಾಜರಾಗಬಹುದು. ಇದರರ್ಥ, ಎಲ್ಲರಿಗೂ ಸಾರ್ವಜನಿಕ ರಜೆ ಇರುವುದಿಲ್ಲ.
ಅಂದಹಾಗೆ ಮಾರ್ಚ್ 29 ಮತ್ತು 30 ದಿನಗಳು ವಾರಾಂತ್ಯ ರಜೆ ಇದ್ದು ಮುಂದೆ ಮಾರ್ಚ್ 31 ಹಣಕಾಸು ವರ್ಷದ ಕೊನೆಯ ದಿನ ಆಗಿರಲಿದೆ. ಈ ದಿನವಿಡಿ ಸಾಕಷ್ಟು ಹಣಕಾಸು ಲೆಕ್ಕಾಚಾರಗಳ ಕೆಲಸ ನಡೆಯಲಿದೆ.
ಇದರಿಂದಾಗಿ, ಸರ್ಕಾರಿ ಕೆಲಸಕ್ಕೆ ಯಾವುದೇ ಅಡಚಣೆಯಾಗಬಾರದು ಎಂಬ ಉದ್ದೇಶದಿಂದ ಈದ್ ರಜೆಯನ್ನು ನಿಯಂತ್ರಿತ ರಜೆ (RH) ಆಗಿ ಪರಿವರ್ತಿಸಲಾಗಿದೆ.
Comments are closed.