Dubai Crown Prince: ತನ್ನ 4ನೇ ಮಗುವಿಗೆ ‘ಹಿಂದ್’ ಎಂದು ಹೆಸರಿಟ್ಟ ದುಬೈ ಶೇಕ್

Dubai Crown Prince: ದುಬೈನ ರಾಜಕುಮಾರ ಶೇಖ್ ಹಮ್ದಾನ್ ಮತ್ತು ಅವರ ಪತ್ನಿ ಶೀಖಾ ಶೀಖಾ ಬಿಂತ್ ಸಯೀದ್ ಬಿನ್ ಥಾನಿ ಅಲ್ ಮುಕ್ತೌಮ್ ತಮ್ಮ ದಾಂಪತ್ಯದ ಗುರುತಾಗಿ ನಾಲ್ಕನೇ ಮಗುವನ್ನು ತಮ್ಮ ಮನೆಗೆ ಸ್ವಾಗತಿಸಿದ್ದಾರೆ. ಇದೀಗ ಅವರ ಕುಟುಂಬದವರೆಲ್ಲರೂ ಸೇರಿ ಮಗುವಿಗೆ ‘ಹಿಂದ್’ ಎಂದು ನಾಮಕರಣ ಮಾಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಶೇಖ್ ಹಮ್ದಾನ್ ನಮ್ಮ ಪ್ರಾರ್ಥನೆಯನ್ನು ಪೂರ್ಣಗೊಳಿಸಿ ನಮಗೆ ಸಂಪೂರ್ಣ ಕೃಪೆ ತೋರಿದ ದೇವರಿಗೆ ನಾನು ಧನ್ಯವಾದ ಹೇಳುತ್ತೇನೆ. ದೇವರು ನಮಗೆ ಹೆಣ್ಣು ಮಗುವನ್ನು ಕರುಣಿಸಿದ್ದಾನೆ.
ಇನ್ನೂ ಆ ಮಗುವಿಗೆ ಹಿಂದ್ ಬಿಂಟ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಎಂದು ಹೆಸರನ್ನು ಇಟ್ಟಿದ್ದಾರೆ. ಈ ಹೆಸರು ಅರೇಬಿಕ್ ಮತ್ತು ಇಸ್ಲಾಮಿಕ್ ಸಂಪ್ರದಾಯಗಳಲ್ಲಿ ಆಳವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇನ್ಸ್ಟಾಗ್ರಾಮ್ ನಲ್ಲಿ ಸುದ್ದಿಯನ್ನು ಹಂಚಿಕೊಂಡ ಅವರು, “ಓ ಅಲ್ಲಾ, ಅವಳಿಗೆ ನಿನ್ನ ಪ್ರೀತಿಯಿಂದ ತುಂಬಿದ ಹೃದಯ ಮತ್ತು ನಿನ್ನನ್ನು ಸ್ಮರಿಸುವ ನಾಲಿಗೆಯನ್ನು ನೀಡು, ಮತ್ತು ಅವಳನ್ನು ನಿನ್ನ ಬೆಳಕು ಮತ್ತು ಮಾರ್ಗದರ್ಶನದಲ್ಲಿ ಬೆಳೆಯುವಂತಾಗಲಿ, ಎಂದು ಬರೆದುಕೊಂಡಿದ್ದಾರೆ.
Comments are closed.