of your HTML document.

Chikkamagaluru: ವರದಕ್ಷಿಣೆ ಕಿರುಕುಳ; ಗೃಹಿಣಿ ಸಾವು! ದೂರು ದಾಖಲು

Chikkamagaluru: ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಗೃಹಿಣಿಯೊಬ್ಬರು ಸಾವಿಗೀಡಾಗಿರುವ ಘಟನೆ ಎನ್‌.ಆರ್‌.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

ಮಮತಾ ಮೃತ ಮಹಿಳೆ.

ನಾಲ್ಕು ವರ್ಷದ ಹಿಂದೆ ಮಮತಾಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ 110 ಗ್ರಾಂ ಚಿನ್ನ ನೀಡಿ ಪೋಷಕರು ಮದುವೆ ಮಾಡಿಸಿದ್ದರು. ಅನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಗಂಡನ ಮನೆಯವರ ಹಿಂಸೆ ತಾಳಲಾರದೆ ಮಮತಾ ಆ ಮನೆ ಬಿಟ್ಟು ತನ್ನ ತವರು ಮನೆಗೆ ಬಂದಿದ್ದರು. ಅನಂತರ ರಾಜಿ ಪಂಚಾಯಿತಿ ಮಾಡಿ ಮತ್ತೆ ಗಂಡನ ಮನೆಗೆ ಹೋಗಿದ್ದರು.

ಮಮತಾ ಪತಿ ಅವಿನಾಶ್‌ ತೋಟದ ನಿರ್ವಹಣೆ ಕೆಲಸಕ್ಕೆಂದು 50 ಸಾವಿರ ಪಡೆದಿದ್ದ. ನಂತರ ಜನವರಿ 25 ರಂದು ಪಿಟ್ಸ್‌ ಬಂದಿದೆ ಎಂದು ಹೇಳಿ ಮಮತಾಳನ್ನು ಆಸ್ಪತ್ರೆಗೆ ಸೇರಿಸಿದ್ದ. ಆದರೆ ಅವಿನಾಶ್‌ ಚಿಕ್ಕಪ್ಪ ಮಮತಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ ಎಂದು ಮಮತಾ ಪೋಷಕರಲ್ಲಿ ಹೇಳಿಕೆ ನೀಡಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಮಮತಾ ಸಾವಿಗೀಡಾಗಿದ್ದಾಳೆ.

ಇದೀಗ ಮಮತಾ ಅಣ್ಣ ಮಂಜುನಾಥ್‌ ಮಮತಾ ಗಂಡ, ಅತ್ತೆ ಮಾವನ ವಿರುದ್ಧ ಬಾಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

Comments are closed.