of your HTML document.

Bolt Stuck in Man: ಗುಪ್ತಾಂಗದಲ್ಲಿ ಸಿಲುಕಿದ್ದ ಬೋಲ್ಟ್‌ ನಟ್‌ ತೆಗೆಯಲು ಅಗ್ನಿ ಶಾಮಕ ಸಿಬ್ಬಂದಿಯನ್ನು ಕರೆಸಿದ ವೈದ್ಯರು!

Bolt Stuck in Man: ಗುಪ್ತಾಂಗದಲ್ಲಿ ಸಿಲುಕಿದ್ದ ಬೋಲ್ಟ್‌ ನಟ್‌ ತೆಗೆಯಲು ವೈದ್ಯರು ಅಗ್ನಿ ಶಾಮಕ ಸಿಬ್ಬಂದಿಯನ್ನು ಕರೆಸಿದ ಘಟನೆ ಕೇರಳದ ಕಾಸರಗೋಡು ಸಮೀಪದ ಕಾಂಇಂಗಾಡಿನಲ್ಲಿ ನಡೆದಿದೆ.

ಕುಡಿದು ಮಲಗಿದ್ದ ವ್ಯಕ್ತಿಯ ಗುಪ್ತಾಂಗಕ್ಕೆ ಯಾರೋ ಬೋಲ್ಟ್‌ ನಟ್‌ ಹಾಕಿದ್ದಾರೆ ಎಂದು ವೈದ್ಯರ ಬಳಿ ಹೇಳಿದ್ದಾನೆ.

46 ವರ್ಷದ ವ್ಯಕ್ತಿ ತನ್ನ ಜನನಾಂಗದ ಸುತ್ತ ಸಿಲುಕಿದ ಒಂದೂವರೆ ಇಂಚಿನ ಬೋಲ್ಟ್‌ ನಟ್ಟನ್ನು ತಾನಾಗಿಯೇ ತೆಗೆಯಲು ಪ್ರಯತ್ನ ಮಾಡಿದ್ದಾನೆ. ಆದರೆ ಆಗಿರಲಿಲ್ಲ. ಅನಂತರ ಜನನಾಂಗದದಲ್ಲಿ ಊತ ಉಂಟಾಗಿದೆ. ಮೂತ್ರ ವಿಸರ್ಜನೆ ಮಾಡುವುದಕ್ಕೂ ಸಂಕಟವಾಗಿದೆ. ಕೊನೆಗೆ ವಿಧಿ ಇಲ್ಲದೆ ಮಂಗಳವಾರ ರಾತ್ರಿ ಜಿಲ್ಲಾಸ್ಪತ್ರೆಯ ವೈದ್ಯರ ಮೊರೆ ಹೋಗಿದ್ದಾರೆ.

ವೈದ್ಯರಿಗೂ ಮರ್ಮಾಂಗದಲ್ಲಿ ಸಿಲುಕಿದ ನಟ್‌ ಬೋಲ್ಟನ್ನು ತೆಗೆಯಲು ಆಗಲಿಲ್ಲ. ಕೊನೆಗೆ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದು ಅವರು ಒಂದೂವರೆ ಗಂಟೆಗೂ ಅಧಿಕ ಕಾಲ ಪ್ರಯತ್ನ ಮಾಡಿ ಕಡೆಗೂ ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ ಬೋಲ್ಟ್‌ ನಟ್‌ನ್ನು ಹೊರತೆಗೆದಿದ್ದಾರೆ.

ಮಧ್ಯರಾತ್ರಿ ವೇಳೆ ಆತನನ್ನು ಆಸ್ಪತ್ರೆಗೆಯಿಂದ ಬಿಡುಗಡೆ ಮಾಡಲಾಯಿತು.

Comments are closed.