of your HTML document.

Arecanut : ಹಳೆ ಅಡಿಕೆಗೆ ಬಂಪರ್ ಬೆಲೆ!!

Arecanut : ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ಸ್ಥಿರವಾಗಿದ್ದ ಡಬ್ಬಲ್‌ ಚೋಲ್‌ ಧಾರಣೆಯಲ್ಲಿ ಏರಿಕೆ ಲಕ್ಷಣ ಕಂಡು ಬಂದಿದೆ. ಹೊರ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಧಾರಣೆ ಕೆ.ಜಿ.ಗೆ 502 ರೂ. ದಾಖಲಾಗಿದೆ.

ಹೌದು, ಎರಡು ವರ್ಷಗಳಿಂದ ತೀವ್ರ ಸ್ವರೂಪದ ಹವಾಮಾನ ವೈಪರೀತ್ಯದಿಂದ ಅಡಿಕೆ ತೋಟದಲ್ಲಿ ಭಾರೀ ಪ್ರಮಾಣದ ಫಸಲು ಕುಸಿತ ಉಂಟಾದ ಪರಿಣಾಮ ಮಾರುಕಟ್ಟೆಯಲ್ಲಿ ಅಡಿಕೆ ಕೊರತೆ ಉದ್ಭವಿಸಿದೆ. ಹೀಗಾಗಿ ಹಳೆ ಅಡಿಕೆಗೆ ಬಂಪರ್ ಬೆಲೆ ಬಂದಿದೆ.

ಅಂದಹಾಗೆ ಕೆಲ ದಿನಗಳಿಂದ ಹೊಸ ಅಡಿಕೆ ಧಾರಣೆ ಹೆಚ್ಚಳ ಕಂಡಿದ್ದರೂ ಸಿಂಗಲ್‌ ಚೋಲ್‌, ಡಬ್ಬಲ್‌ ಚೋಲ್‌ ಧಾರಣೆ ಏರಿಕೆ ಆಗಿರಲಿಲ್ಲ. ಕಳೆದ ವರ್ಷ ಎಪ್ರಿಲ್‌, ಮೇ ತಿಂಗಳ ಬಿಸಿಗೆ ಹಿಂಗಾರ ಒಣಗಿ ಹೆಚ್ಚಿನ ತೋಟಗಳಲ್ಲಿ ಅರ್ಧಕ್ಕಿಂತ ಹೆಚ್ಚು ಫಸಲು ನಷ್ಟವಾಗಿದ್ದು, ಈ ಬಾರಿ ಹೊಸ ಅಡಿಕೆ ಫ‌ಸಲು ಕಡಿಮೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೊರತೆ ಆರಂಭವಾಗಿದ್ದು, ಹಳೆ ಅಡಿಕೆ ಖರೀ ದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಇನ್ನೂ ಮಾ.27 ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 420 ರೂ., ಸಿಂಗಲ್‌ ಚೋಲ್‌ 465 ರೂ., ಡಬ್ಬಲ್‌ ಚೋಲ್‌ 495 ರೂ. ದಾಖಲಾಗಿತ್ತು. ಹೊರ ಮಾರು ಕಟ್ಟೆ ಯಲ್ಲಿ ಹೊಸ ಅಡಿಕೆಗೆ 425 ರೂ., ಸಿಂಗಲ್‌ ಚೋಲ್‌ 472 ರೂ., ಡಬ್ಬಲ್‌ ಚೋಲ್‌ 502 ರೂ.ಧಾರಣೆ ಇತ್ತು.

Comments are closed.