Sullia: ಮಂಗಳೂರಿಗೆ ತೆರಳುತ್ತಿದ್ದ ಸುಳ್ಯದ ಯುವತಿಗೆ ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್!

Sullia: ಸುಳ್ಯದಿಂದ (Sullia) ಮಂಗಳೂರಿಗೆ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಸ್ಥಳೀಯರು ಗೂಸ ನೀಡಿ ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ ಘಟನೆ ಮಾ. 28 ಗುರುವಾರ ಸಂಜೆ ನಡೆದಿದೆ. ಮೋನು ಎಂಬಾತನೆ ಕಿರುಕುಳ ನೀಡಿದ ಆರೋಪಿಯಾಗಿದ್ದಾನೆ.
ಆರೋಪಿ ಮೋನು ಪುತ್ತೂರಿನಿಂದ ಬಿ ಸಿ ರೋಡು ಬರುವ ವೇಳೆ ಯುವತಿಯ ಪಕ್ಕದ ಸೀಟಿನಲ್ಲಿ ಕುಳಿತು ಕಿರುಕುಳ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Comments are closed.