of your HTML document.

Udupi: ಉಡುಪಿ: ಹೆದ್ದಾರಿಯಲ್ಲೇ ಬೈಕ್ ಸವಾರನ ಮೇಲೆರಗಿದ ಜಿಂಕೆ! ಗಾಯಾಳು ಆಸ್ಪತ್ರೆಗೆ ದಾಖಲು!

Udupi: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರನ ಮೇಲೆ ಜಿಂಕೆ ಎರಗಿದ ಉಡುಪಿ (Udupi) ಘಟನೆ ಕೋಟದ ಸಾಲಿಗ್ರಾಮದಲ್ಲಿ ನಡೆದಿದೆ.

ಕುಂಭಾಶಿ ನಿವಾಸಿ ಮಹೇಶ್ ಮೇಲೆ ಜಿಂಕೆ ಎರಗಿದ ಪರಿಣಾಮ ಬೈಕಿನಿಂದ ಆಯ ತಪ್ಪಿ ಬಿದ್ದು ಗಾಯಗೊಂಡು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರು ಸಂತೆಕಟ್ಟೆಯಿಂದ ತೆಕ್ಕಟ್ಟೆ ಕಡೆಗೆ ಕೆಲಸಕ್ಕೆ ಬರುತ್ತಿದ್ದಾಗ ಸಾಲಿಗ್ರಾಮ ಡಿವೈನ್ ಪಾರ್ಕ್ ಸಮೀಪ ಈ ಘಟನೆ ನಡೆದಿದೆ.

ಜಿಂಕೆಗೆ ಯಾವುದೇ ರೀತಿಯ ಗಾಯಗಳಾಗದೆ ಅದು ಎಸ್ಕೇಪ್ ಆಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.