Basanagowda Yatnal: ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ – ಶಾಸಕ ಸ್ಥಾನಕ್ಕೂ ಕುತ್ತು?

Basanagowda Yatnal: ತನ್ನದೇ ಪಕ್ಷಕ್ಕೆ ಬಿಸಿ ತುಪ್ಪವಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ನನ್ನು (Basanagowda Patil Yatnal) ಕೊನೆಗೂ ಬಿಜೆಪಿ ಹೈಕಮಾಂಡ್ 6 ವರ್ಷಗಳ ಕಾಲ ಉಚ್ಛಾಟನೆ (expul) ಮಾಡಿದೆ. ಈ ಬೆನ್ನಲ್ಲೇ ಅವರ ಶಾಸಕ ಸ್ಥಾನಕ್ಕೂ ಕುತ್ತು ಬರುತ್ತದೆ ಎನ್ನಲಾಗುತ್ತಿದೆ. ಹಾಗಿದ್ದರೆ ಇದು ಸಾಧ್ಯವೇ?
ಹೌದು, ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ. ಇದು ಯತ್ನಾಳ್ ಅವರ ಶಾಸಕ ಸ್ಥಾನಕ್ಕೆ ಸಮಸ್ಯೆ ಉಂಟು ಮಾಡುತ್ತಾ? ಎಂದು ಪ್ರಶ್ನೆಯನ್ನು ಹುಟ್ಟು ಹಾಕಿದೆ. ಆದರೆ ಇದು ಯತ್ನಾಳ್ ಅವರ ಶಾಸಕ ಸ್ಥಾನಕ್ಕೆ ಯಾವುದೇ ಕುತ್ತು ತರುವುದಿಲ್ಲ. ಅವರು ಶಾಸಕರಾಗಿಯೇ ಮುಂದುವರೆಯಲಿದ್ದಾರೆ.
ಯಸ್, ಬಿಜೆಪಿ ಪ್ರಾಥಮಿಕ ಸಮಸ್ಯತ್ವ ಸ್ಥಾನದಿಂದ ಉಚ್ಚಾಟನೆಗೊಂಡಿರುವ ಯತ್ನಾಳ್ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗುವ ಹಾಗಿಲ್ಲ. ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಅವರು ವೇದಿಕೆ ಹಂಚಿಕೊಳ್ಳುವ ಹಾಗಿಲ್ಲ. ಆದರೆ ಶಾಸಕರಾಗಿ ಅವರು ಮುಂದುವರಿಯುತ್ತಾರೆ. ಆದರೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲೂ ಅವರಿಗೆ ಭಾಗಿಯಾಗಲು ಅವಕಾಶ ಇರುವುದಿಲ್ಲ ಅಷ್ಟೇ.
ಇಷ್ಟು ಮಾತ್ರವಲ್ಲದೆ ಪಕ್ಷದಿಂದ ಉಚ್ಚಾಟನೆಗೊಂಡರೂ ವಿಧಾನಸಭೆಯಲ್ಲಿ ಅವರ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆಗಳು ನಡೆಯುವುದಿಲ್ಲ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಯತ್ನಾಳ್ ಅವರು ಬಿಜೆಪಿ ಸದಸ್ಯರ ಆಸನದಲ್ಲಿ ಕುಳಿತುಕೊಳ್ಳಬಹುದು ಅಥವಾ ಪ್ರತ್ಯೇಕವಾಗಿಯೂ ಕುಳಿತುಕೊಳ್ಳಲು ಅವಕಾಶ ಇದೆ.
Comments are closed.