Matrimony: ಮ್ಯಾಟ್ರಿಮೋನಿಯಲ್ಲಿ ಐಎಎಸ್ ಅಧಿಕಾರಿ ಎಂದು ಹೇಳಿ ಮಹಿಳೆಯರಿಗೆ ವಂಚನೆ!

Matrimony: ಮ್ಯಾಟ್ರಿಮೋನಿಯಲ್ಲಿ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಮಹಿಳೆಯರಿಗೆ ಹಣ ವಂಚನೆ ಮಾಡುತ್ತಿದ್ದ ಪ್ರಕರಣ ನಡೆದಿದೆ.
ಜೀವನ್‌ಕುಮಾರ್ ಎಂಬ ವ್ಯಕ್ತಿ ಐಡಿ ಕ್ರಿಯೇಟ್ ಮಾಡಿ ಐಎಎಸ್ ಆಫೀಸರ್ ಎಂದು ಹೇಳಿ ಮಹಿಳೆಗೆ ವಂಚನೆ ಮಾಡುತ್ತಿದ್ದ. ಐಎಎಸ್, ಐಪಿಎಸ್ ಆಗಿರುವುದಾಗಿ ಹೇಳುತ್ತಿದ್ದ. ನಂತರ ಮದುವೆಯಾಗುವುದಾಗಿ ನಂಬಿಸಿ ಕ್ಲೋಸ್ ಆಗಿ ಮೆಸೇಜ್ ಮಾಡಿ, ಖಾಸಗಿ ಫೋಟೋ ಹಾಗೂ ವಿಡಿಯೋ ಪಡೆಯುತ್ತಿದ್ದ.
ಇದಾದ ಬಳಿಕ ಅಮ್ಮನಿಗೆ ಕ್ಯಾನ್ಸರ್ ಇದೆ ಎಂದು ಹೇಳಿ ಚಿಕಿತ್ಸೆಗೆ ಹಣ ಬೇಕು ಎಂದು ಹೇಳಿ, ಮೊದಲಿಗೆ 3 ಲಕ್ಷ, ಮತ್ತೆ 5 ಲಕ್ಷ ಹಣ ಡಿಮ್ಯಾಂಡ್ ಮಾಡಿದ್ದ. ಹಣ ಕೊಡದೇ ಹೋದರೆ ಖಾಸಗಿ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ.
ದೂರು ನೀಡಲು ಹೋದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈತ ಇದೇ ರೀತಿಯಾಗಿ ದೇಶಾದ್ಯಂತ 20ಕ್ಕೂ ಅಧಿಕ ಮಹಿಳೆಯರಿಗೆ ಮೋಸ ಮಾಡಿರುವುದು ತಿಳಿದು ಬಂದಿದೆ.
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Comments are closed.