Uttar Pradesh: ಪತ್ನಿಯ ಅಕ್ರಮ ಸಂಬಂಧ; ಪ್ರಿಯಕರನ ಜೊತೆ ಮದುವೆ ಮಾಡಿಸಿದ ಪತಿ!

Lucknow: ಪತ್ನಿಯ ಅಕ್ರಮ ಸಂಬಂಧ ತಿಳಿದ ಪತಿ ಆಕೆಯನ್ನು ಪ್ರಿಯಕರನ ಜೊತೆ ಮದುವೆ ಮಾಡಿಸಿದ ವಿಚಿತ್ರ ಘಟನೆ ಉತ್ತರಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ನಡೆದಿದೆ.
ಬಬ್ಲೂ ಮತ್ತು ರಾಧಿಕಾ 2017 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬಬ್ಲೂ ಜೀವನಕ್ಕಾಗಿ ದುಡಿಮೆಯ ಕಾರಣದಿಂದ ಮನೆಯಿಂದ ದೂರವಿರುತ್ತಿದ್ದ. ಈ ಸಮಯದಲ್ಲಿ ರಾಧಿಕಾ ಅದೇ ಹಳ್ಳಿಯ ಓರ್ವ ಯುವಕನನ್ನು ಇಷ್ಟಪಡಲು ಪ್ರಾರಂಭಿಸಿದಳು. ಇದು ನಂತರ ಪ್ರೀತಿಗೆ ತಿರುಗಿ ಸಂಬಂಧ ಬೆಳೆಯಿತು.
ಈ ಸಂಬಂಧ ದೀರ್ಘಕಾಲ ನಡೆಯಿತು. ಒಂದು ದಿನ ಬಬ್ಲೂ ಕುಟುಂಬದವರಿಗೆ ಇವರಿಬ್ಬರ ಸಂಬಂಧ ತಿಳಿಯಿತು. ನಂತರ ಬಬ್ಲೂ ರಾಧಿಕಾಗೆ ಆಯ್ಕೆ ನೀಡಿದನು. ಪ್ರಿಯಕರ ಅಥವಾ ಪತಿ ಆಯ್ಕೆ ನೀಡಿದಾಗ ಆಯ್ಕೆ ಪ್ರಿಯಕರನನ್ನು ಆರಿಸಿದಳು. ಬಬ್ಲೂ ಪ್ರಿಯಕರನ ಜೊತೆ ಮದುವೆ ಮಾಡಿಸಿದ.
ಇನ್ನು ತನ್ನ ಎರಡು ಮಕ್ಕಳನ್ನು ತಾನೇ ನೋಡಿಕೊಳ್ಳುವುದಾಗಿ ಬಬ್ಲೂ ತಿಳಿಸಿದ್ದಾನೆ.
Comments are closed.