Koppala: ರಾತೋರಾತ್ರಿ ಭುಗಿಲೆದ್ದಿದೆ ಆಕ್ರೋಶ- ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ವಿರುದ್ಧ ತಿರುಗಿಬಿದ್ದ ಭಕ್ತರು!!

Koppala: ಕೊಪ್ಪಳದ ರಾಘವೇಂದ್ರ ಸ್ವಾಮಿ ಮಠದ ಭೂಮಿ ವಿಚಾರವಾಗಿ ಮಂತ್ರಾಲಯದ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ವಿರುದ್ಧ ಭಕ್ತರು ತಿರುಗಿಬಿದ್ದಿದ್ದಾರೆ. ಈ ಮೂಲಕ ಕೊಪ್ಪಳ ರಾಘವೇಂದ್ರ ಮಠ ಆಸ್ತಿ ವಿವಾದ ಮತ್ತೆ ಭುಗಿಲೆದ್ದಿದೆ.
ಹೌದು, ಕೊಪ್ಪಳ(Koppala) ರೈಲು ನಿಲ್ದಾಣದ ಬಳಿ ಇರುವ ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯದ ಮಠಕ್ಕೆ ಸೇರಿದೆ ಎಂದು ಮಂತ್ರಾಲಯದ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹೇಳಿದ್ದು, ಈ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ.
ಏನಿದು ವಿವಾದ?
ಕೊಪ್ಪಳದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬುಧವಾರ ರಾತ್ರಿ ಸುಬುಧೇಂದ್ರ ತೀರ್ಥರ ಸ್ವಾಮೀಜಿಗಳು ಆಗಮಿಸಿದ್ದರು. ಆಶೀರ್ವಚನ ನೀಡುವಾಗ ಶ್ರೀಗಳು, ಮಠಕ್ಕೆ ನೂತನವಾಗಿ ಟ್ರಸ್ಟ್ ರಚನೆ ಮಾಡಬೇಕು. ಟ್ರಸ್ಟ್ ಸಮಿತಿಯಲ್ಲಿ ಯಾರು ಇರಬೇಕು ಎನ್ನುವ ಪಟ್ಟಿಯನ್ನು ನೀಡಿ ಆಮೇಲೆ ಈ ಬಗ್ಗೆ ತೀರ್ಮಾನಿಸುತ್ತೇವೆ. ಈ ಮಠವು ಶಿಥಿಲಗೊಂಡಿದ್ದು, ನಾವು ಹಣ ನೀಡಿ ಅಭಿವೃದ್ಧಿ ಪಡಿಸುತ್ತೇವೆ ಎಂದು ಹೇಳಿದ್ರು. ಬಳಿಕ ನಗರದ ಬಸವನಗರದ ರಾಘವೇಂದ್ರಾಚಾರ್ ನಿವಾಸಕ್ಕೆ ತೆರಳಿದ್ದರು.
ಆದರೆ ಅವರ ಹೇಳಿಕೆ ಖಂಡಿಸಿದ ನಗರದ ರಾಘವೇಂದ್ರ ಮಠದಿಂದ ನೂರಾರು ಜನ ವಿಪ್ರ ಸಮಾಜದವರು ಶ್ರೀಗಳು ಇರುವ ರಾಘವೇಂದ್ರಾಚಾರ್ ಮನೆಗೆ ತೆರಳಿ, ಆಕ್ರೋಶ ವ್ಯಕ್ತಪಡಿಸಿದ್ರು. ಕೊಪ್ಪಳದ ರಾಘವೇಂದ್ರ ಮಠವನ್ನು ಮಂತ್ರಾಲಯದ ಮಠದ ಸುರ್ಪದಿಗೆ ಹಂತ ಹಂತವಾಗಿ ಪಡೆಯಲು ಹುನ್ನಾರ ನಡೆಸಿದ್ದಾರೆ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ 1971 ರಲ್ಲಿ ಮಂತ್ರಾಲಯ ಮಠಕ್ಕೆ ಸುಪರ್ದಿ ಕೊಟ್ಟ ದಾಖಲೆಯಿವೆ ಅಂತ ಮಂತ್ರಾಲಯ ಮಠದ ಸ್ವಾಮೀಜಿ ಹೇಳಿದರೂ ಸ್ವಾಮೀಜಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಭಕ್ತರು, ಇದು ಮಂತ್ರಾಲಯ ಮಠಕ್ಕೆ ಸೇರಿಲ್ಲ. ಇದು ಸ್ವತಂತ್ರ ಮಠ ಎಂದಿದ್ದಾರೆ. ಇಂದು ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಶ್ರೀಗಳು ಮಟ್ಟಕ್ಕೆ ತೆರಳಿದ್ದಾರೆ.
Comments are closed.