BJP: ಇನ್ಮುಂದೆ ಬಿಜೆಪಿಯೇ ಬೇರೆ, ಕೇಸರಿಯೆ ಬೇರೆ ; ಓಂ ಶಾಂತಿ ಕರ್ನಾಟಕ ಬಿಜೆಪಿ – ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿ ವಿರುದ್ಧ ತೊಡೆತಟ್ಟಿದ ಹಿಂದೂಗಳು!!

BJP: ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ. ಈ ಬೆನ್ನಲ್ಲೇ ಹಿಂದುಗಳು ಬಿಜೆಪಿ ವಿರುದ್ಧ ಹಿಡಿದು ಇನ್ನು ಮುಂದೆ ಬಿಜೆಪಿಗೆ ಬೇರೆ ಕೇಸರಿಯೆ ಬೇರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಗತಿ ದೊರೆಯಲಿ… ಹಿಂದೂಗಳು ಒಗ್ಗಟ್ಟಾಗಿ ಮುನ್ನಡೆಯೋಣ!!!
pic.twitter.com/idBsIoAgj8— Mahesh Vikram Hegde (@mvmeet) March 26, 2025
ಹೌದು, ಯತ್ನಾಳ್ ಉಚ್ಚಾಟನೆಯಾಗುತ್ತಿದ್ದಂತೆ ಪರ ವಿರೋಧಗಳು ವ್ಯಕ್ತವಾಗಿವೆ. ಯತ್ನಾಳ್ ಉಚ್ಚಾನೆಗೆ ಟ್ರೋಲ್‌ಗಳು ವ್ಯಕ್ತವಾಗಿದ್ದು, ತವರು ಜಿಲ್ಲೆಯಲ್ಲಿಯೇ ಕೆಲ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನೂ ಕೆಲವರು ರಾಜ್ಯ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಹಿಂದೂ ನಾಯಕ ಯತ್ನಾಳ್ ಅವರನ್ನು ಉಚ್ಚಾಟಿಸಿದ್ದಕ್ಕೆ ಬಿಜೆಪಿ ವಿರುದ್ಧ ವಿಜಯಪುರ ನಗರ ಮಂಡಲ ಅಧ್ಯಕ್ಷ ಶಂಕರ್ ಹೂಗಾರ್ ಭಾವುಕರಾಗಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಇನ್ನುಮುಂದೆ ಬಿಜೆಪಿ ಧ್ವಜ ಬೇಡ, ಕೇಸರಿ ಧ್ವಜ ಸಾಕು ಇದು ಶಾಶ್ವತ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಸದಾ ಯತ್ನಾಳ್ ಹೇಳಿಕೆಗಳ ಭಜನೆ ಮಾಡುತ್ತಿದ್ದ ಪೋಸ್ಟ್ ಕಾರ್ಡ್ ಸಹ ಈ ಕುರಿತು ಪ್ರತಿಕ್ರಿಯಿಸಿದ್ದು, ಓಂಶಾಂತಿ ಕರ್ನಾಟಕ ಬಿಜೆಪಿ ಎಂದು ಬರೆದುಕೊಂಡಿದೆ.
Comments are closed.