Food: ಪನ್ನೀರ್ ನಲ್ಲೂ ಕಲಬೆರಕೆ! ಬ್ಯಾನ್ ಆಗುತ್ತಾ ಪನ್ನೀರ್?

Food: ಈಗಾಗಲೇ ಕಲ್ಲಂಗಡಿ, ಟೊಮೆಟೊ ಸಾಸ್, ಇಡ್ಲಿಗೆ ಬಳಸುವ ಪೇಪರ್ ಅನ್ನು ಬ್ಯಾನ್ ಮಾಡಿದ ಬೆನ್ನಲ್ಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು 80 ಕ್ಕೂ ಹೆಚ್ಚು ಕಡೆಯಿಂದ ಪನ್ನೀರ್ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿದೆ.
ಪನ್ನೀರು ಸಾಕಷ್ಟು ಮೆದುವಾಗಿದ್ದು, ಇದು ಆರೋಗ್ಯಕ್ಕೆ ಹಾನಿಕರ ರಾಸಾಯನಿಕ ಕಲಬೆರಕೆ ಮಾಡುತ್ತಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ, ಆರೋಗ್ಯ ಇಲಾಖೆಯ ಅಧಿಕಾರಿಗಳು ಪನ್ನೀರ್ ಅನ್ನು ಲ್ಯಾಬ್ ಗೆ ಕಳುಹಿಸಲಾಗಿದೆ. ಇದರಲ್ಲಿ ಎರಡು ಕಡೆ ಸಂಗ್ರಹಿಸಿದ ಪನ್ನೀರ್ ಸುರಕ್ಷಿತವಲ್ಲ ಎಂದು ತಿಳಿದು ಬಂದಿದೆ.
ಪನ್ನೀರ್ ಅನ್ನು ತಯಾರಿಸಲು ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಪ್ರೊಟೀನ್ ಅನ್ನು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದು ಬಂದಿದೆ. ಪನ್ನೀರ್ ನಲ್ಲಿ ಬ್ಯಾಕ್ಟಿರಿಯಾ ಅಂಶ ಇರುವ ಆರೋಪಗಳು ಕೇಳಿಬರುತ್ತಿದೆ.
ಇದೀಗ ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಪನ್ನೀರ್ ಅನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಂದೆರಡು ದಿನಗಳಲ್ಲಿ ರಿಪೋರ್ಟ್ ಬರುತ್ತದೆ. ಎಲ್ಲಾಕಡೆ ಕಲಬೆರಕೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ, ಕಲಬೆರಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
Comments are closed.