Crime: ಅಪ್ರಾಪ್ತ ಬಾಲಕಿಯ ಅಪಹರಿಸಿ ಸ್ಮಶಾನಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ!

Crime: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸ್ಮಶಾನಕ್ಕೆ ಎಳೆದೊಯ್ದು ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ (Crime) ಗಾಜಿಯಾಬಾದ್ನಲ್ಲಿ ನಡೆದಿದೆ.
ಆರೋಪಿಗಳಲ್ಲಿ ಒಬ್ಬ ಆ ಬಾಲಕಿಗೆ ಪರಿಚಯವಿದ್ದ ಕಾರಣ ಆತನೇ ಕರೆ ಮಾಡಿ ಪುಸಲಾಯಿಸಿ ಆಕೆಯನ್ನು ಕರೆಸಿಕೊಂಡು ಸ್ನೇಹಿತನ ಜತೆ ಸೇರಿ ಅಪಹರಿಸಿದ್ದ. ಸ್ಮಶಾನಕ್ಕೆ ಕರೆದೊಯ್ದರೆ ಆ ಕಡೆಗೆ ಯಾರೂ ಬರುವುದಿಲ್ಲವೆಂದು ಅಲ್ಲಿಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಸಂತ್ರಸ್ತೆ ತನ್ನ ಮೇಲೆ ನಡೆದ ದೌರ್ಜನ್ಯವನ್ನು ತನ್ನ ಪೋಷಕರಿಗೆ ವಿವರಿಸಿದಾಗ ಅವರು ತಕ್ಷಣ ಆಕೆಯನ್ನು ನಿವಾರಿ ಪೊಲೀಸ್ ಠಾಣೆಗೆ ಕರೆತಂದು ಎಫ್‌ಐಆರ್ ದಾಖಲಿಸಿದ್ದಾರೆ. ಬಾಲಕಿಯ ದೂರಿನ ಆಧಾರದ ಮೇಲೆ ಅಶ್ರಫ್ ಹಾಗೂ ಮತ್ತೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ.
Comments are closed.