of your HTML document.

Ola Meesalati: ಒಳ ಮೀಸಲಾತಿ ಜಾರಿ – ಸರ್ಕಾರದಿಂದ ಬಿಗ್ ಅಪ್ಡೇಟ್

Ola Meesalati: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ವಿಚಾರ ರಾಜ್ಯದಲ್ಲಿ ಚರ್ಚೆಗೆ ಬಂದಿದೆ. ಇದೀಗ ಈ ಒಳ ಮೀಸಲಾತಿ ಜಾರಿ ಕುರಿತಾಗಿ ರಾಜ್ಯ ಸರ್ಕಾರವು ಮಹತ್ವದ ಅಪ್ಡೇಟ್ ಒಂದನ್ನು ನೀಡಿದೆ. ಈ ಕುರಿತಾಗಿ ಸಚಿವ ಕೆಎಚ್ ಮುನಿಯಪ್ಪ ಅವರು ಮಾಹಿತಿ ನೀಡಿದ್ದಾರೆ.

ಹೌದು, ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ಸಭೆಯಲ್ಲಿ ಸಚಿವ ಕೆ ಹೆಚ್‌ ಮುನಿಯಪ್ಪ ಭಾಗಿಯಾಗಿದ್ದು, ಮಹತ್ವ ಅಪ್‌ಡೇಟ್‌ ನೀಡಿದ್ದಾರೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಒಂದು ವಾರದೊಳಗೆ ಒಳ ಮೀಸಲಾತಿಯ ಮಧ್ಯಂತರ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಒಳಮೀಸಲಾತಿಯು ಮೂರು ದಿನ, ಮೂವತ್ತು ದಿನ, ಇಲ್ಲವೇ ಮೂರು ತಿಂಗಳಲ್ಲಿ ಜಾರಿಯಾಗಲಿದೆ. ಅದಕ್ಕಿಂತ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಒಳಮೀಸಲಾತಿಯಿಂದ ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಒಡಕು ಉಂಟಾಗುತ್ತದೆ ಎಂಬುದೆಲ್ಲ ಸುಳ್ಳು. ಪರಿಶಿಷ್ಟ ಜಾತಿಯ ಭಾಂದವರು ಶಾಂತಿಯಿಂದರಬೇಕು. ಯಾವುದೇ ಪಕ್ಷದ ಅಥವಾ ಸಂಘ ಸಂಸ್ಥೆಗಳ ಮುಖಂಡರು ಸಹಕರಿಸಿಬೇಕು ನಮ್ಮ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಜಾರಿಗೊಳಿಸಲು ಬದ್ದರಾಗಿದ್ದಾರೆ. ತಾವು ಯಾರೂ ಧೃತಿಗೆಡಬಾರದು. ನ್ಯಾ.ನಾಗಮೋಹನ್ ದಾಸ್ ರವರು ವೈಜ್ಞಾನಿಕವಾಗಿ ಸಂಪೂರ್ಣ ಪರಿಶೀಲಿಸಿ ತೀರ್ಮಾಣ ಮಾಡಲಿದ್ದಾರೆ ಕಾಲಮಿತಿ ಬಹಳ ದೂರವಿಲ್ಲ ನಾವು ಅಂತಿಮ ಘಟ್ಟದಲ್ಲಿ ಇದ್ದೀವಿ ಮೂವತ್ತು ವರ್ಷಗಳ ಹೋರಾಟಕ್ಕೆ ಪ್ರತಿಫಲ ಸಿಗಲಿದೆ. ನಮ್ಮ ಸಮುದಾಯ ಬಹಳಷ್ಟು ನೊಂದಿದೆ ನಮ್ಮ ಸರ್ಕಾರ ಒಂದು ಐತಿಹಾಸಿಕ ವಾದ ತೀರ್ಮಾಣ ಮಾಡಲಿದೆ ನಮ್ಮ ಸಹೋದರರಾದ ಪರಮೇಶ್ವರ್, ಮಹದೇವಪ್ಪ,ಶಿವರಾಜ್ ತಂಗಡಗಿ, ಪ್ರಿಯಾಂಕ್ ಖರ್ಗೆ ರವರು ಒಮ್ಮತ ಅಭಿಪ್ರಾಯ ಸೂಚಿಸಿದ್ದು, ಇದರಲ್ಲಿ ಯಾರ ಮೇಲೆಯೂ ಸಂಶಯ ಪಡಬಾರದು ಎಂದು ಕೆ ಹೆಚ್‌ ಮುನಿಯಪ್ಪ ಅವರು ತಿಳಿಸಿದರು.

ಬಳಿಕ ಮಾತನಾಡಿದ ಅವರು ಒಳಮೀಸಲಾತಿ ಅನುಷ್ಠಾನ ಅತಿ ಶೀಘ್ರದಲ್ಲಿ ಆಗಲಿದ್ದು ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳದೆ ನಡೆಯಲಿದೆ. ನ್ಯಾ. ನಾಗಮೋಹನ್ ದಾಸ್ ರವರ ಮಧ್ಯಂತರ ವರದಿ ಸರ್ಕಾರಕ್ಕೆ ಒಪ್ಪಿಸಿದ ನಂತರ ಇದರ ಕುರಿತು ನಾವು ನೀವು ಯಾವರೀತಿಯ ತೀರ್ಮಾಣ ಮಾಡಬೇಕು ಎಂಬುದನ್ನು ಚರ್ಚೆ ಮಾಡಬೇಕಾಗುತ್ತದೆ ಅಲ್ಲಿಯವರೆಗೂ ಶಾಂತವಾಗಿರಿ ಎಂದರು.

ಇನ್ನೂ ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ ಮಾತನಾಡಿ, ‘ಒಳಮೀಸಲಾತಿಗಾಗಿ 30 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡಿದಾಗ ಘರ್ಷಣೆಗಳಾಗಿದ್ದವು. ಈಗ ಯಾವ ಪಂಗಡದವರೂ ಒಳಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ವೈಜ್ಞಾನಿಕವಾಗಿ ನಡೆಯಲಿ ಎಂದು ಬಯಸುತ್ತಿದ್ದಾರೆ. ಇಷ್ಟೇ ದಿನಗಳ ಒಳಗೆ ಎಂದು ಗಡುವು ಹೇಳಲು ಸಾಧ್ಯವಿಲ್ಲ. ನಾವು ಗಡುವು ತಿಳಿಸಿದರೆ ಒಂದರೆಡು ದಿನ ಆಚೀಚೆ ಆದರೂ ನೀವು ಧಿಕ್ಕಾರ ಕೂಗುತ್ತೀರಿ. ಆರು ತಿಂಗಳು–ಒಂದು ವರ್ಷವೆಲ್ಲ ಬೇಕಾಗಿಲ್ಲ. ಮುಖ್ಯಮಂತ್ರಿಯವರ ಮೇಲೆ, ನಮ್ಮ ಮೇಲೆ ನಂಬಿಕೆ ಇಡಿ’ ಎಂದರು.

Comments are closed.