of your HTML document.

Maha Kumba Mela: ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಜನರ ಸಂಖ್ಯೆಯನ್ನು ಲೆಕ್ಕ ಹಾಕಿದ್ದು ಹೇಗೆ? 

Maha Kumba Mela: ಮಹಾ ಕುಂಭಮೇಳದ ವೇಳೆ ಪವಿತ್ರ ಸ್ನಾನ ಮಾಡಿದ 66.3 ಕೋಟಿ ಭಕ್ತರನ್ನು(Devotees)ಎಣಿಸಲು ಉತ್ತರ ಪ್ರದೇಶ ಸರ್ಕಾರವು(UP Govt) ಒಂದು ಸಂಯೋಜಿತ ಕೇಂದ್ರವನ್ನು ರಚಿಸಿತ್ತು ಎಂದು UP ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(CM Yogi Adityanath) ಹೇಳಿದ್ದಾರೆ. ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾಗಳನ್ನು(CCTV) ಅಳವಡಿಸಿ, Al ಪರಿಕರಗಳನ್ನು ಬಳಸಿಕೊಂಡು ಎಣಿಕೆ ನಡೆಸಿದ್ದಾರೆ ಎಂದು ಅವರು ಹೇಳಿದರು. “ಯಾವುದೇ ವ್ಯಕ್ತಿಯನ್ನು 24 ಗಂಟೆಗಳಲ್ಲಿ ಎರಡು ಬಾರಿ ಎಣಿಸದಂತೆ ನಾವು ಖಚಿತಪಡಿಸಿಕೊಂಡಿದ್ದೇವೆ. ಮುಖ ಗುರುತಿಸುವಿಕೆ ವ್ಯವಸ್ಥೆಯೂ ಇತ್ತು” ಎಂದು ಅವರು ಹೇಳಿದರು.

2025 ರ ಮಹಾ ಕುಂಭದಲ್ಲಿ ಭಾಗವಹಿಸಿದ ಭಕ್ತರ ಸಂಖ್ಯೆಯ ಬಗ್ಗೆ ಮಾತನಾಡುತ್ತಾ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “45 ದಿನಗಳ ಮಹಾ ಕುಂಭದಲ್ಲಿ 66.3 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು. ಮುಖ ಗುರುತಿಸುವಿಕೆ ಮತ್ತು ತಲೆ ಎಣಿಕೆಯ ವ್ಯವಸ್ಥೆ ಇತ್ತು. ಪ್ರತಿ 24 ಗಂಟೆಗಳ ನಂತರ, ಅಂತಿಮ ಡೇಟಾವನ್ನು ಸಿದ್ಧಪಡಿಸಲಾಯಿತು. ಅದಕ್ಕಾಗಿ, ನಾವು ಒಂದು ಸಂಯೋಜಿತ ಕೇಂದ್ರವನ್ನು ರಚಿಸಿದ್ದೇವು, ಅದರ ಮೂಲಕ ಈ ಎಲ್ಲಾ ವಿಷಯಗಳನ್ನು ಮೇಲ್ವಿಚಾರಣೆ ಮಾಡಲಾಯಿತು ಎಂದು ಅವರು ಖಾಸಗಿ ವಾಹಿಸಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Comments are closed.