Viral Post: ಈಶ್ವರಪ್ಪನಿಂದ ಹಿಡಿದು ಯತ್ನಾಳ್ ತನಕ..!! ‘ಅಪ್ಪ- ಮಗ ಸೇರಿ ಮುಗಿಸಿದ 14 ನಾಯಕರ’ ಪಟ್ಟಿ ವೈರಲ್ !!

Share the Article

Viral Post: ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ.

ಈ ಬೆನ್ನಲ್ಲೇ ಬಿಜೆಪಿಯಲ್ಲಿ ಯತ್ನಾಳ್ ಬೆಂಬಲಿಗರ ರಾಜೀನಾಮೆ ಪರ್ವ ಶುರುವಾಗಿದೆ. ಈ ಮೂಲಕ ಕರ್ನಾಟಕ ಬಿಜೆಪಿಗೆ ಬಿ. ಎಸ್. ಯಡಿಯೂರಪ್ಪ ಅವರೇ ಸರ್ವೋಚ್ಚ, ಅವರ ಮಾತೇ ಫೈನಲ್​ ಎಂದು ಬಿಜೆಪಿ ವರಿಷ್ಠರು ಪರೋಕ್ಷವಾಗಿ ಘೋಷಿಸಿದಂತಾಗಿದೆ. ಈ ಬೆನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ‘ಈಶ್ವರಪ್ಪನಿಂದ ಹಿಡಿದು ಯತ್ನಾಳ್ ತನಕ.. ಅಪ್ಪ ಮಗ ಸೇರಿ ಮುಗಿಸಿದ ಹಿಂದೂ ನಾಯಕರು’ ಎಂದು ಪಟ್ಟಿ ಒಂದು ವೈರಲ್ ಆಗಿದೆ.

ಹೌದು, ಯತ್ನಾಳ್ ಉಚ್ಚಾಟನೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಗಳು ವ್ಯಕ್ತವಾಗಿದ್ದು, ಯತ್ನಾಳ್ ಪರ ಬ್ಯಾಟ್ ಬೀಸುತ್ತಿರುವವರು ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ಕುಟುಂಬ ಕಾರಣಕ್ಕೆ ಬಲಿಯಾದ 14ನೇ ಬಿಜೆಪಿ ನಾಯಕ ಯತ್ನಾಳ್ ಎಂದು ಕಿಡಿಕಾರಿದ್ದಾರೆ. ಇಷ್ಟೇ ಅಲ್ಲದೆ ನೆಟ್ಟಿಗನೋರ್ವ’ ಅಪ್ಪ ಮಗ ಸೇರಿ ಮುಗಿಸಿದ 14 ಹಿಂದೂ ನಾಯಕರು’ ಎಂದು ಪಟ್ಟಿಯೊಂದನ್ನು ಹಾಕಿದ್ದು, ಇದು ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಅನಂತಕುಮಾರ ಖತಂ

ಅಪ್ಪ-ಮಗ ಸೇರಿ ಮುಗಿಸಿದ ಹಿಂದು ನಾಯಕ‌ರು

– ಈಶ್ವರಪ್ಪ ಖತಂ

– ಅನಂತಕುಮಾರ ಹೆಗಡೆ ಖತಂ

– ಕಟೀಲು ಖತಂ

– ಸಿಟಿರವಿ ಖತಂ

– ಸೇಡಂಜಿ ಖತಂ

– ಸದಾಗೌಡ ಖತಂ

– ಸಿಂಹ ಖತಂ

– ಶೆಟ್ಟರ್ ಖತಂ

– BLಸಂತೋಷ ಖತಂ

– ಜೋಶಿ ಖತಂ

– ರಾಮಲು ಖತಂ

ಸೋಮಣ್ಣ ಖತಂ

– ಯಾತ್ನಾಳ ಖತಂ

– RSS, VHP, ಶ್ರೀರಾಸೇ,‌ ಭರಂದಳ ಖತಂ!

Comments are closed.