Vehicle rate: ಏಪ್ರಿಲ್ 1ರಿಂದ ರಾಜ್ಯದಲ್ಲಿ ಹೊಸ ವಾಹನ ಖರೀದಿ ದುಬಾರಿ

Vehicle rate: ರಾಜ್ಯ ಸರ್ಕಾರ(State govt) ಏಪ್ರಿಲ್ ತಿಂಗಳಿನಿಂದ ಹೆಚ್ಚುವರಿ ಸೆಸ್ ವಿಧಿಸುವುದರ ಜತೆಗೆ ವಾಹನಗಳ ಬಿಡಿ ಭಾಗಗಳು ಮತ್ತು ಉಕ್ಕು ಆಮದು ದರ(Import rate) ಏರಿಕೆಯಾದ ಹಿನ್ನೆಲೆ ಏಪ್ರಿಲ್ 1ರಿಂದ ಹೊಸ ವಾಹನಗಳ ಬೆಲೆ ದುಬಾರಿಯಾಗಲಿದೆ(Rate hike). ಹೊಸ ದ್ವಿಚಕ್ರ ವಾಹನಗಳ(Two Wheeler) ಬೆಲೆ ಶೇ.2 ಮತ್ತು ಕಾರುಗಳ(Car) ಬೆಲೆ ಶೇ.4ರಷ್ಟು ಏರಿಕೆಯಾಗಲಿದೆ. ₹1 ಲಕ್ಷದ ದ್ವಿಚಕ್ರ ವಾಹನದ ಬೆಲೆ ₹2ರಿಂದ ₹3 ಸಾವಿರ ಹೆಚ್ಚಾದರೆ, ₹5 ಲಕ್ಷದ ಕಾರಿನ ಬೆಲೆ ₹15ರಿಂದ ₹20 ಸಾವಿರದವರೆಗೆ ಏರಿಕೆಯಾಗಲಿದೆ. ₹10 ಲಕ್ಷದ ಕಾರಿನ ಬೆಲೆ ₹30ರಿಂದ *40 ಹೆಚ್ಚಾಗಲಿದೆ.
ಈಗ ಒಂದು ಆಟೋ ಎಕ್ಸ್ ಷೋ ರೂಮ್ ಪ್ರೈಸ್- 2 ಲಕ್ಷದ 73 ಸಾವಿರದ 200 ರೂಪಾಯಿ ಇದೆ. ಅದು 2 ಲಕ್ಷದ 78 ಸಾವಿರದ 200 ಆಗಲಿದೆ. ಕಾರುಗಳ ಬೆಲೆಯಲ್ಲಿ ಶೇಕಡಾ 2 ರಿಂದ 3 ರಷ್ಟು ದರ ಏರಿಕೆಯಾಗಲಿದೆ. ರಾಜ್ಯ ಸರ್ಕಾರ ಮಾರ್ಚ್ ತಿಂಗಳಿನಿಂದಲೇ ಸೆಸ್ ಏರಿಕೆ ಮಾಡಿದೆ. ಇದರ ಪರಿಣಾಮ ದ್ವಿಚಕ್ರ ವಾಹನ ಬೆಲೆ 500 ರೂಪಾಯಿಯನ್ನು ಸರ್ಕಾರ ವಸೂಲಿ ಮಾಡುತ್ತಿದೆ. ಇನ್ನು ಕಾರುಗಳ ಮೇಲೆ 1000 ರೂಪಾಯಿ ಸೆಸ್ ರೂಪದಲ್ಲಿ ಹಣ ತೆಗೆದುಕೊಳ್ಳುತ್ತಿದೆ. ಮೂಲಕ ವಾಹನ ಮಾರಾಟ ಕುಸಿತ ಕಾಣಲಿದೆ. ವಾಹನ ಖರೀದಿಗೆ ಜನರು ಹಿಂದೇಟು ಹಾಕುವ ಎಲ್ಲಾ ಸಾಧ್ಯತೆಗಳು ಗೋಚಾರವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಟ್ಯಾಕ್ಸಿ ಓನರ್ ಅಸೋಸಿಯೇಷನ್ ಅಧ್ಯಕ್ಷ ರಾಮಕೃಷ್ಣ ಹೊಳ್ಳ ಹೇಳಿದ್ದಾರೆ.
Comments are closed.