of your HTML document.

Bank Holiday: ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯ: ಮಾರ್ಚ್ 30ರಿಂದ ಎಪ್ರಿಲ್‌ 1ರ ವರೆಗೆ ರಜೆ: 

Bank Holiday: ರಾಷ್ಟ್ರೀಕೃತ ಬ್ಯಾಂಕ್‌ಗಳು(Bank) ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಮಾರ್ಚ್‌ 30ರಿಂದ ಏಪ್ರಿಲ್ 1ರವರೆಗೆ ಸತತ 3 ದಿನಗಳ ಕಾಲ ಸಾರ್ವಜನಿಕರ ದೈನಂದಿನ ವ್ಯವಹಾರ ವ್ಯತ್ಯಯವಾಗಲಿದೆ. ಮಾರ್ಚ್ 30 ಭಾನುವಾರದಂದು ಸಾರ್ವಜನಿಕ ರಜಾದಿನವಾಗಿದೆ. ಮಾರ್ಚ್ 31ರಂದು ರಂಜಾನ್ ರಜೆ ರದ್ದು ಮಾಡಲಾಗಿದ್ದರೂ, ಆ ದಿನ ಹಣಕಾಸು ವರ್ಷದ ಕೊನೆಯ ದಿನವಾದ್ದರಿಂದ ಸಾರ್ವಜನಿಕರ ಸೇವೆ ಅನುಮಾನವಾಗಿದೆ.

ಏಪ್ರಿಲ್ 1ರ ಮಂಗಳವಾರ ವಾರ್ಷಿಕ ಖಾತೆಗಳ ಸಮನ್ವಯಕ್ಕಾಗಿ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವುದಿಲ್ಲ. ಏತನ್ಮಧ್ಯೆ, ಮಾರ್ಚ್ 29 ಐದನೇ ಶನಿವಾರ, ಅಂದರೆ ಆ ದಿನ ಬ್ಯಾಂಕುಗಳು ತೆರೆದಿರುತ್ತವೆ.

Comments are closed.