of your HTML document.

Dog Attack: ಸಾಕು ನಾಯಿಗಳ ದಾಳಿಯಿಂದ ಮಹಿಳೆಗೆ ಗಂಭೀರ ಗಾಯ, ಮುಖಕ್ಕೆ 20 ಸ್ಪಿಚ್

Dog Attack: ಡಾಬರ್‌ಮ್ಯಾನ್(Dobermann) ಹಾಗೂ ಪಿಟ್‌ ಬುಲ್(Pit bull) ತಳಿಯ 2 ಸಾಕು ನಾಯಿಗಳು ದಾಳಿ ಮಾಡಿದ ಪರಿಣಾಮ 37 ವರ್ಷದ ಮಹಿಳೆಗೆ(Woman) ಗಂಭೀರ ಗಾಯವಾದ ಘಟನೆ ಮಹಾರಾಷ್ಟ್ರದ(Maharashtra) ಮುಂಬೈನಲ್ಲಿ(Bombay) ನಡೆದಿದೆ. ರೀಚಾ ಸಂಚಿತ್ ಕೌಶಿಕ್ ಸಿಂಗ್ ಅರೋರ ಎಂಬ ಮಹಿಳೆ ತಮ್ಮ ಹೊಸ ಮನೆಯ ನಿರ್ಮಾಣ ಕಾರ್ಯವನ್ನು ಪರಿಶೀಸಲು ಹೋಗುತ್ತಿದ್ದಾಗ ದಿವೇಶ್ ವಿರ್ಕ್ ಎಂಬುವವರ ಎರಡು ನಾಯಿಗಳು ದಾಳಿ ಮಾಡಿವೆ. ಇದರಿಂದ ರೀಚಾ ಅವರ ಮೂಗು ಸೇರಿ ಮುಖದ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಆಕೆಯ ಮುಖಕ್ಕೆ ವೈದ್ಯರು 20 ಹೊಲಿಗೆ ಹಾಕಿದ್ದಾರೆ ಎಂದು ವರದಿಯಾಗಿದೆ.

ದಿವೇಶ್ ವೀರ್ಕ್ ಅವರ ಚಾಲಕ ಅತುಲ್ ಸಾವಂತ್ ಹಾಗೂ ಮನೆಕೆಲಸದವರಾದ ಸ್ವಾತಿ ಅವರು ನಾಯಿಯನ್ನು ಹಿಡಿದುಕೊಂಡಿದ್ದರು. ಸ್ವಾತಿ ಹಿಡಿದುಕೊಂಡಿದ್ದ ಕಂದು ಬಣ್ಣದ ನಾಯಿ ಆಕೆ ಮೇಲೆ ದಾಳಿ ಮಾಡಿ ಕಚ್ಚಿದೆ. ನಾಯಿಯನ್ನು ದೂರ ತಳ್ಳಲು ಪ್ರಯತ್ನಿಸಿದಾಗ, ಸಾವಂತ್ ಹಿಡಿದುಕೊಂಡಿದ್ದ ಕಪ್ಪು ನಾಯಿ ಕೂಡ ದಾಳಿ ಮಾಡಿದೆ ಎಂದು ಪೊಲೀಸರು ತಿಳಿಸಿದರು.

ನಾಯಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ, ನಾನು ಬಿದ್ದೆ. ನಂತರ ಕಪ್ಪು ನಾಯಿ ನನ್ನ ಮೂಗು ಮತ್ತು ಬಲ ತೊಡೆಯ ಮೇಲೆ ಕಚ್ಚಿದ್ದು, ಇದರಿಂದ ನನಗೆ ಗಂಭೀರ ಗಾಯವಾಯಿತು ಎಂದು ರಿಚಾ ತಿಳಿಸಿದರು.

Comments are closed.