Airport: ಮಲೇಷ್ಯಾದಿಂದ ಕಾಡುಕೋತಿಗಳ ಸಾಗಣೆ: ಬೆಂಗಳೂರು ಏರ್ಪೋರ್ಟ್ನಲ್ಲಿ ಆರೋಪಿ ಸೆರೆ!

Airport: ಮಲೇಷ್ಯಾದಿಂದ ಕಾಡು ಪ್ರಾಣಿಗಳ ಕಳ್ಳಸಾಗಣೆ ಮಾಡುತ್ತಿದ್ದ ಆರು ಜೀವಂತ ಕಾಡು ಕೋತಿಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಪತ್ತೆ ಮಾಡಲಾಗಿದ್ದು, ಅವುಳನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ಭಾನುವಾರ ರಾತ್ರಿ ಮಲೇಷ್ಯಾದ ಕೌಲಾಲಂಪುರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ತಮಿಳುನಾಡಿನ ಪ್ರಯಾಣಿಕರೊಬ್ಬರ ಸೂಟ್ಕೇಸ್ನಲ್ಲಿ ಆರು ಜೀವಂತ ಕೋತಿಗಳು ಪತ್ತೆಯಾಗಿವೆ. ಅವುಗಳನ್ನು ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ರಕ್ಷಣೆ ಮಾಡಿ ಒಂದೇ ದಿನದಲ್ಲಿ ಮಲೇಷ್ಯಾಗೆ ವಾಪಸ್ ಕಳುಹಿಸಿದ್ದಾರೆ.
Comments are closed.