of your HTML document.

Gang Rape: ನಗ್ನ ವಿಡಿಯೋ ತೋರಿಸಿ ಬೆದರಿಕೆ: 18 ಪುರುಷರಿಂದ 18 ತಿಂಗಳು ಮಹಿಳೆ ಮೇಲೆ ಅತ್ಯಾಚಾರ

Gang Rape: ಕಳೆದ 18 ತಿಂಗಳಲ್ಲಿ 18 ಜನ ತಮ್ಮ ಮೇಲೆ ಅತ್ಯಾಚಾರ(Rape) ನಡೆಸಿದ್ದಾರೆ ಎಂದು ರಾಜಸ್ಥಾನದ(Rajasthan) ಚುರು ಜಿಲ್ಲೆಯಲ್ಲಿ 32 ವರ್ಷದ ಮಹಿಳೆ ದೂರು ನೀಡಿದ್ದಾರೆ. ಪೊಲೀಸರ(Police) ಪ್ರಕಾರ, ಸಂತ್ರಸ್ತೆ ಮೇಲೆ ಸುಮಾರು ಒಂದೂವರೆ ವರ್ಷದ ಹಿಂದೆ ಗ್ಯಾನ್ ಸಿಂಗ್ ಎಂಬ ನೆರೆಮನೆಯವರು ಅತ್ಯಾಚಾರ ಎಸಗಿದ್ದರು. ನಂತರ ಸಿಂಗ್‌ ಮತ್ತು ಅವನ ಸ್ನೇಹಿತರು ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದು, ನಗ್ನ ವಿಡಿಯೋ(Video) ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಮಹಿಳೆ ಗ್ರಾಮ ತೊರೆದು ಹೋದರೂ ವಿಡಿಯೋ ವೈರಲ್ ಮಾಡುವುದಾಗಿ ಹೇಳಿದ್ದರು.

ಪೊಲೀಸ್ ವರದಿಗಳ ಪ್ರಕಾರ, ಯಾವುದೋ ಕೆಲಸದ ನೆಪದಲ್ಲಿ, ಆಕೆಯನ್ನು ಮನೆಗೆ ಬರಲು ಹೇಳಿ ಆಕೆಯನ್ನು ಖೆಡ್ಡಾಕ್ಕೆ ಕೆಡವಲಾಗಿತ್ತು. ಒಳಗೆ ಹೋದ ನಂತರ, ಗ್ಯಾನ್ ಸಿಂಗ್ ಬಾಗಿಲನ್ನು ಲಾಕ್ ಮಾಡಿ, ಆಕೆಯ ಮೇಲೆ ಬಲವಂತಪಡಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ಅಪರಾಧವನ್ನು ಬಹಿರಂಗಪಡಿಸಿದರೆ ಆಕೆಯ ಮಕ್ಕಳು ಮತ್ತು ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

ನಂತರ ನಡೆದದ್ದು ಭೀಕರವಾದ ದೌರ್ಜನ್ಯದ ಮಾದರಿ. ಗ್ಯಾನ್ ಸಿಂಗ್ ಮಹಿಳೆಯನ್ನು ಬೇರೆ ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದ್ದಾನೆ, ಅಲ್ಲಿ ಅವನು ಮತ್ತು ಅವನ ಸಹಚರರು ಬ್ಲ್ಯಾಕ್‌ಮೇಲ್ ಮಾಡಲು ಆಕೆಯ ನಗ್ನ ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ. ನಿರಂತರ ಬೆದರಿಕೆಗಳ ಅಡಿಯಲ್ಲಿ, ಆಕೆಯ ಮೇಲೆ ಪದೇ ಪದೇ ಹಲ್ಲೆ ನಡೆಸಲಾಯಿತು, ಮತ್ತು ಆಕೆಯನ್ನು ತಾರಾನಗರದ ಹೋಟೆಲ್ ಸೇರಿದಂತೆ ಹಲವಾರು ಸ್ಥಳಗಳಿಗೆ ಕರೆಸಿ ಈ ಕೃತ್ಯ ಎಸಗಲಾಗಿದೆ. ಅಲ್ಲಿ ಹಲವಾರು ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದರು.

ಗ್ಯಾನ್ ಸಿಂಗ್, ಭಾಲ್ ಸಿಂಗ್, ಕಾನ್ ಸಿಂಗ್, ನಾಥು ಸಿಂಗ್, ಭನ್ವರ್ ಸಿಂಗ್, ಲಕ್ಷ್ಮಣ್ ಸಿಂಗ್, ರಾಮಾವತಾರ್, ಮುಖೇಶ್, ಮಹೇಂದ್ರ, ರಾಮದಯಾಳ್, ರಘುವೀರ್, ಧನ್ನೆ ಸಿಂಗ್, ಪ್ರೇಮ್ ಸಿಂಗ್, ಪವನ್, ರಾಕೇಶ್, ರಂಜಿತ್ ಸಿಂಗ್, ರೂಪ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಇವರು ಗುರುತಿಸಲಾದ ಆರೋಪಿಗಳು. ಇವರೆಲ್ಲಾ ಆಕಗೆ ನಿರಂತರ ಕಿರುಕುಳವನ್ನು ಮುಂದುವರೆಸಿದ್ದು, ಅವರ ವಿಡೀಯೋಗಳನ್ನು ಬಳಸಿಕೊಂಡು ಬೆದರಿಕೆಗಳನ್ನು ಹಾಕಿದ್ದರು. ಅವರು ಇಷ್ಟೆಲ್ಲಾ ಹಿಂಸೆ ಅನುಭವಿಸಿದ್ರು, ಮಾನ, ಮರ್ಯಾದೆಗೆ ಅಂಜಿ ಭಯವು ಅವರನ್ನು ವಿಷಯ ಎಲ್ಲೋ ಪ್ರಸ್ತಾಪಿಸದಂತೆ ಮಾಡಿತ್ತು.

Comments are closed.