Kundapura: ಪರೀಕ್ಷೆಯಲ್ಲಿ ಇಷ್ಟು ಮಾರ್ಕ್ ಬರಬೇಕು; ದೈವಕ್ಕೆ ಚೀಟಿಯಲ್ಲಿ ಮನವಿ ಮಾಡಿದ ವಿದ್ಯಾರ್ಥಿ!

Kundapura: ಪರೀಕ್ಷೆಯಲ್ಲಿ ತನ್ನನ್ನು ಪಾಸ್ ಮಾಡಿಸುವಂತೆ ದೇವರಿಗೆ ಚೀಟಿಯನ್ನು ಬರೆದಿದ್ದಾನೆ. ಪರೀಕ್ಷೆಯಲ್ಲಿ ನನಗೆ ಇಂತಿಷ್ಟು ಅಂಕ ಬರಬೇಕೆಂದು ಚೀಟಿ ಬರೆದು ಅದನ್ನು ಹುಂಡಿಗೆ ಹಾಕಿ ದೈವ ದೇವರಲ್ಲಿ ಜಸ್ಟ್ ಪಾಸ್ ಮಾಡಿಸುವಂತೆ ಮನವಿ ಮಾಡಿದ್ದಾನೆ. ಈ ಚೀಟಿ ಪೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಈ ಚೀಟಿ ಕಂಡು ಬಂದಿದೆ. ದೈವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುವ ವೇಳೆ ಚೀಟಿ ಲಭ್ಯವಾಗಿದೆ.
Namma Kundapura ಎನ್ನುವ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಲಾಗಿದೆ. “ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಬರಬೇಕು ದೇವರೇ ಹೊರ ಬೊಬ್ಬರ್ಯ; ಗಣಿತ- 39, 38, 37, 36, ಇಂಗ್ಲೀಷ್- 39, 38, 37, ಕನ್ನಡ- 40, 39 ವಿಜ್ಞಾನ- 39, 38, ಹಿಂದಿ- 40, 39, ಸಮಾಜ ವಿಜ್ಞಾನ- 38, 37 ಮತ್ತೆ ಇದಕ್ಕಿಂತ ಕಡಿಮೆ ಅಂಕ ಬೇಡ ದೇವರೆ” ಎಂದು ಚೀಟಿಯಲ್ಲಿ ಬರೆಯಲಾಗಿದೆ.
Comments are closed.