of your HTML document.

Accident: ಅಪಘಾತಗೊಂಡವರಿಗೆ ಸಹಾಯ ಮಾಡಿದರೆ 25,000 ರೂ ಬಹುಮಾನ: ಕೇಂದ್ರ ಸಚಿವ ನಿತಿನ್ ಗಡ್ಕರಿ

Accident: ರಸ್ತೆ ಅಪಘಾತಗಳಾದಾಗ (Accident) ಸಂತ್ರಸ್ತರ ನೆರವಿಗೆ ಧಾವಿಸುವ ಮೂರನೇ ವ್ಯಕ್ತಿಗೆ 25,000 ರೂ ಬಹುಮಾನ ನೀಡಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ ವರ್ಷಕ್ಕೆ ಐದು ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇದರಿಂದ ಜಿಡಿಪಿಗೆ ಶೇ. 3 ನಷ್ಟವಾಗುತ್ತದೆ ಎಂದಿದ್ದಾರೆ. ಸರಿಯಾದ ಡಿಪಿಆರ್ ಇಲ್ಲದೆ ರಸ್ತೆ ನಿರ್ಮಾಣಗೊಂಡಿರುವುದು ಅಪಘಾತಗಳಿಗೆ ಕಾರಣ ಎನ್ನುತ್ತಾರೆ.

ಅಪಘಾತಕ್ಕೊಳಗಾದ ವ್ಯಕ್ತಿಗೆ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ಇರುತ್ತದೆ. ಅದೆಷ್ಟೋ ಪ್ರಕರಣಗಳಲ್ಲಿ ಗಂಭೀರ ಗಾಯವಾಗಿ ಜೀವ ಹೋಗುತ್ತಿದ್ದರೂ ಯಾರೂ ನೆರವಿಗೆ ಮುಂದಾಗದೇ ಪ್ರಾಣ ಬಿಟ್ಟಿರುವುದುಂಟು. ಈ ಹಿನ್ನೆಲೆಯಲ್ಲಿ, ಜನರಲ್ಲಿ ಸಹಾಯ ಮನೋಭಾವನೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅಪಘಾತದ ಗಾಯಾಳುವಿನ ನೆರವಿಗೆ ಮುಂದಾಗುವ ಮೂರನೇ ವ್ಯಕ್ತಿಗೆ 25,000 ರೂ ಬಹುಮಾನ ನೀಡಲಾಗುವುದು ಎಂದಿದ್ದಾರೆ.

ಅದಲ್ಲದೆ ಅಪಘಾತದಿಂದ, ಅಥವಾ ಅಪಘಾತದ ಬಳಿಕ ವ್ಯಕ್ತಿಯು ಯಾವುದೇ ಆಸ್ಪತ್ರೆಗೆ ದಾಖಲಾದರೆ, ಅವರಿಗೆ ಒಂದೂವರೆ ಲಕ್ಷ ರೂವರೆಗೂ ಧನಸಹಾಯ ನೀಡಲಾಗುವುದು. ಅಥವಾ ಏಳು ವರ್ಷಗಳವರೆಗೆ ವೈದ್ಯರಿಂದ ಆಗುವ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುವುದು’ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

Comments are closed.