of your HTML document.

Putturu: ಊಟ ಮಾಡಿ ಮಲಗಿದ ಮಗು ಸಾವು! ದೂರಿನಲ್ಲಿ ಏನಿದೆ?

Uppinangady: ಊಟ ಮಾಡಿ ಮಲಗಿದ ಎರಡೂವರೆ ವರ್ಷದ ಮಗು ಇದ್ದಕ್ಕಿದ್ದಂತೆ ಸಾವಿಗೀಡಾದ ಘಟನೆ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಹಾರ ಸಿಕ್ಕಿಕೊಂಡು ಅಥವಾ ಬೇರೆ ಯಾವುದೋ ಕಾಯಿಲೆ ಉಲ್ಭಣಗೊಂಡು ಸಾವಿಗೀಡಾಗಿರುವುದಾಗಿ ತಾಯಿ ನೀಡಿದ ದೂರಿನ ಪ್ರಕಾರ ಉಪ್ಪಿನಂಗಡಿ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.

ಮಾ.25 ರ ಬೆಳಿಗ್ಗೆ 11 ಗಂಟೆಗೆ ದಿವ್ಯಾಂಶಿ ಸಿಂಗ್‌ ಮಗುವಿಗೆ ಊಟ ಕೊಟ್ಟು ನಂತರ ಮಗುವಿನ ನಿದ್ದೆ ಬಂದ ಕಾರಣ ಮಲಗಿಸಿದ್ದಾರೆ. ಮಧ್ಯಾಹ್ನ 1 ಗಂಟೆ ಹೋಗಿ ಮಗುವನ್ನು ಎಬ್ಬಿಸಿದಾಗ ಮಗು ಎದ್ದಿಲ್ಲ. ಕೂಡಲೇ ತಾಯಿ ತೋಟದ ಮಾಲಕ ಲಿಂಡೋರಾಜ್‌ ಗಮನಕ್ಕೆ ಬಂದಿದ್ದಾರೆ. ಕೂಡಲೇ ಅವರು ಕಾರಿನಲ್ಲಿ ಮಗುವನ್ನು ಕಡಬದ ಖಾಸಗಿ ಆಸ್ಪತ್ರೆಗೆ ತಂದಿದ್ದು, ಪರಿಶೀಲನೆ ಮಾಡಿದಾಗ ಮಗುವ ಮೃತ ಹೊಂದಿರುವುದಾಗಿ ತಿಳಿಸಿದ್ದಾರೆ.

ಮಗು ರುದ್ರಪ್ರತಾಪ್‌ ಆಹಾರ ಸಿಕ್ಕಿಕೊಂಡು ಅಥವಾ ಇನ್ಯಾವುದೋ ಕಾರಣಕ್ಕೆ ಮೃತ ಪಟ್ಟಿರುವುದಾಗಿದೆ. ಮರಣದಲ್ಲಿ ಬೇರೆ ಯಾವುದೇ ಸಂಶಯವಿಲ್ಲ. ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಮುಂದಿನ ಅಂತ್ಯ ಕ್ರಿಯೆಯ ಬಗ್ಗೆ ಬಿಟ್ಟುಕೊಡಬೇಕಾಗಿ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

Comments are closed.